ನಿಮ್ಮ ಕಣ್ಣಿಗೊಂದು ಸವಾಲ್! ಈ ಫೋಟೋದಲ್ಲಿರುವ ಟೆನಿಸ್ ಬಾಲ್ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್.

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ ಎಂದು ಕರೆಯುತ್ತೇವೆ.