'ದ್ವಿತೀಯ ಪಿಯು ವಿದ್ಯಾರ್ಥಿ'ಗಳಿಗೆ ಮಹತ್ವದ ಮಾಹಿತಿ: 'ಕರಡು ಪ್ರವೇಶ ಪತ್ರ ತಿದ್ದುಪಡಿಗೆ' ದಿನಾಂಕ ವಿಸ್ತರಣೆ

'ದ್ವಿತೀಯ ಪಿಯು ವಿದ್ಯಾರ್ಥಿ'ಗಳಿಗೆ ಮಹತ್ವದ ಮಾಹಿತಿ: 'ಕರಡು ಪ್ರವೇಶ ಪತ್ರ ತಿದ್ದುಪಡಿಗೆ' ದಿನಾಂಕ ವಿಸ್ತರಣೆ

ಬೆಂಗಳೂರು: ಮಾರ್ಚ್ 2023ರ ದ್ವಿತೀಯ ಪಿಯುಸಿ ಪರೀಕ್ಷೆಯ ( Karnataka Second PU Exam 2023 ) ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು, ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 2023ರ ದ್ವಿತೀಯ ಪಿಯುಸಿ ಪರೀಕ್ಷೆಯ ( PUC Exam ) ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು, ಅಗತ್ಯ ತಿದ್ದುಪಡಿಗಳನ್ನು PU EXAM PORTAL LOGINನಲ್ಲಿ ಮಾಡಿಕೊಳ್ಳಲು ದಿನಾಂಕ 25-01-2023ರ ಇಂದಿನವರೆಗೆ ಅವಕಾಶ ನೀಡಲಾಗಿತ್ತು ಎಂದಿದೆ.

ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಈ ದಿನಾಂಕವನ್ನು ಮತ್ತೆ ವಿಸ್ತರಿಸುವಂತೆ ಮಂಡಲಿಗೆ ಕೋರಿದ್ದಾರೆ. ಈ ಹಿನ್ನಲೆಯಲ್ಲಿ ದಿನಾಂಕ 30-01-2023ರ ಸಂಜೆ 5.30ರವರೆಗೆ ವಿಸ್ತರಿಸಲಾಗಿದೆ. ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆಯಿಂದ ಸ್ವೀಕೃತವಾದ ಅರ್ಜಿಗಳನ್ನು ಕ್ರೋಢೀಕರಿಸಿ, KSEAB ಮಂಡಲಿಗೆ ದಿನಾಂಕ 31-01-2023ರೊಳಗೆ ಸಲ್ಲಿಸುವಂತೆ ಸೂಚಿಸಿದೆ.