ದಡೇಸುಗೂರು ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ವೃದ್ಧೆಗೆ ನನ್ನ ಕಾರು ಡಿಕ್ಕಿಯಾಗಿಲ್ಲ : ಶಾಸಕ ಸ್ಪಷ್ಟನೆ

ಕೊಪ್ಪಳ : ಶಾಸಕ ದಡೇಸುಗೂರು ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಘಾತ ಸಂಬಂಧಿಸಿ, ನನ್ನ ಕಾರು ಡಿಕ್ಕಿಯಾಗಿದ್ದು ನಾಯಿಗೆ, ವೃದ್ಧೆಗಲ್ಲ ಎನ್ನುವ ಮೂಲಕ ಪ್ರಕರಣ ಹೊಸ ಕಥೆ ಕಟ್ಟಿ ಸ್ಪಷ್ಟನೆ ನೀಡಿದ್ದಾರೆ .
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಾಸಕ ದಂಡೇಸುಗೂರು ಮಾತನಾಡಿ, ನನ್ನ ಕಾರು ವೃದ್ಧೆ ಮರಿಯಮ್ಮಗೆ ಡಿಕ್ಕಿಯಾಗಿಲ್ಲ, ಕಾರು ಡಿಕ್ಕಿಯಾಗಿದ್ದು ನಾಯಿಗೆ ವೃದ್ದೆಗಲ್ಲ. ನಾಯಿ ವೃದ್ಧೆ ಮೇಲೆ ಹಾರಿಬಿದ್ದಿದ್ದಕ್ಕೆ ಸತ್ತಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ನಾನೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದೇನೆಂದು ಸ್ಪಷ್ಟನೆ ನೀಡಿದ್ದಾರೆ.
ಕೊಪ್ಪಳ ಶಾಸಕ ದಂಡೇಸುಗೂರು ಕಾರು ಅಪಘಾತ ಪ್ರಕರಣ :
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಕ್ರಾಸ್ ನಲ್ಲಿ ಬಿಜೆಪಿ ಶಾಸಕ ದಡೇಸಗೂರು ಬಸವರಾಜ್ ಅವರ ಕಾರು ವೃದ್ಧೆಗೆ ಡಿಕ್ಕಿಯಾದ ಪರಿಣಾಮ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವಿಧವಾ ವೇತನ ಪಡೆಯಲು ಚೆಳ್ಳೂರುಗೆ ಹೋಗಿದ್ದ ವೃದ್ಧೆ ಮರಿಯಮ್ಮ ವಾಪಸ್ ಮನೆಗೆ ಹಿಂದುರುಗುತ್ತಿದ್ದಾಗ ಶಾಸಕ ದಡೇಸಗೂರು ಅವರ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮರಿಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ