ಮಾಂಡಸ್ ಚಂಡಮಾರುತದ ಅಬ್ಬರ; ಭಾರೀ ಮಳೆಯ ಅಲರ್ಟ್
ಚೆನ್ನೈ: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಮಾಂಡಸ್ ಚಂಡಮಾರುತದ ರೂಪ ತಳೆದಿದೆ. IMD ಪ್ರಕಾರ, ಮಾಂಡಸ್ ಚಂಡಮಾರುತವು ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿದೆ ಮತ್ತು ಚೆನ್ನೈನಿಂದ ಸರಿಸುಮಾರು 600 ಕಿಮೀ ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ 3 ಗಂಟೆಗಳಲ್ಲಿ ತಮಿಳುನಾಡಿನ ಚೆನ್ನೈ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಲಘು ಮಳೆಯ ಎಚ್ಚರಿಕೆ ನೀಡಲಾಗಿದೆ.