ಕೋಲಾರವನ್ನು ಗೆಲ್ಲಲು ನಾವು ಪಣ ತೊಟ್ಟಿದ್ದೇವೆ : ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಟಾಂಗ್

ಕೋಲಾರವನ್ನು ಗೆಲ್ಲಲು ನಾವು ಪಣ ತೊಟ್ಟಿದ್ದೇವೆ : ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಟಾಂಗ್

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಹಲವು ಟೀಕೆಗಳಿಗೆ ಕಾರಣವಾಗಿದೆ.

ಇದೀಗ ಈ ಕುರಿತು ಸಚಿವ ಡಾ,ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ರಾಜಕೀಯ ತೀರ್ಮಾನ ಅವರಿಗೆ ಮಾರಕವಾಗಬಹುದು, ಜಿಲ್ಲೆಗಳ ಇತರ ಕ್ಷೇತ್ರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಕೋಲಾರಕ್ಕೂ ಅವರಿಗೂ ಯಾವುದೇ ರೀತಿಯ ವಿಶೇಷ ಸಂಬಂಧ ಇಲ್ಲ. ಅಲ್ಪಸಂಖ್ಯಾತ ಮತಗಳು ಮತ್ತು ಇತರೆ ಹಲವು ಜಾತಿಗಳ ಮತಗಳ ಲೆಕ್ಕಾಚಾರದಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿರ್ಸಲು ತೀರ್ಮಾನಿಸಿದ್ದಾರೆ ಎಂದರು.

ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ವ್ಯೂಹ ನಾವು ಮಾಡುತ್ತೇವೆ , ಕೋಲಾರವನ್ನು ಗೆಲ್ಲಲು ನಾವು ಪಣ ತೊಟ್ಟಿದ್ದೇವೆ ಎಂದು ಸುಧಾಕರ್ ಹೇಳಿದರು.ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಇತ್ತ ಸಿದ್ದರಾಮಯ್ಯನವರು ತಮಗೆ ಕೈ ಹಿಡಿದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದಿದ್ದರು., ಇದೀಗ ಸದ್ಯ ಕೋಲಾರದ ಕಡೆ ಮುಖಮಾಡಿರುವ ಸಿದ್ದರಾಮಯ್ಯ ಈ ಬಾರಿ ಅಲ್ಲಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.