ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ಲವರ್ ಶೋಗೆ ಡೇಟ್ ಫಿಕ್ಸ್ : ಜ.19ರಿಂದ 29ವರೆಗೆ ಆಯೋಜನೆ

ಬೆಂಗಳೂರು : ಗಣರಾಜೋತ್ಸವ ನಿಮಿತ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಡೇಟ್ ಫಿಕ್ಸ್ ಮಾಡಲಾಗಿದ್ದು, ಜ.19 ರಿಂದ 29ವರೆಗೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಕೋವಿಡ್ ಹಿನ್ನೆಲೆ ಕಳೆದ 2 ವರ್ಷಗಳ ನಂತ್ರ ಕಳೆದ ಆಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರದರ್ಶನ ಗೊಂಡಿತ್ತು. ಇದೀಗ ಮತ್ತೆ ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದ ಗ್ಲಾಸ್ ಹೌಸ್‌ನ ಲ್ಲಿ ವಿವಿಧ ಹೂವುಗಳನ್ನು ಅಲಂಕಾರಮಾಡಲಾಗುತ್ತದೆ.
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ಲಾಲ್‌ಬಾಗ್ ಗ್ಲಾಸ್ ಹೌಸ್‌ನಲ್ಲ ಜ 19ರಂದು ಬೆಳಗ್ಗೆ 11 ಗಂಟೆ ಉದ್ಗಾಟನೆಗೊಂಡು 10 ದಿನಗಳ ಕಾಲ ನಡೆಯಲಿದೆ.
ವೀಕ್ಷಕರಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನಕ್ಕಾಗಿ ಡಾರ್ಜಿಲಿಂಗ್, ಪುಣೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ಪ್ರದೇಶಗಳಿಂದ ಹೂವುಗಳನ್ನುತಂದು ಪ್ರದರ್ಶನ ಮಾಡಲಾಗುತ್ತದೆ ಎಂದು ತೋಟಗಾರಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ ಜಗದೀಶ್ ಮಾಹಿತಿ ನೀಡಿದ್ದಾರೆ.