ತಿಪಟೂರಿನಲ್ಲಿ ಘೋರ ಘಟನೆ : ನೇಣು ಬಿಗಿದುಕೊಂಡು ತಾಯಿ-ಮಗ ಆತ್ಮಹತ್ಯೆ

ತಿಪಟೂರು : ನೇಣು ಬಿಗಿದುಕೊಂಡು ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹಾಸನ ವೃತ್ತದ ಬಳಿಯ ಶಾರದಾ ನಗರದ ಮನೆಯಲ್ಲಿ ನಡೆದಿದೆ.
ಕಳೆದ 2 ದಿನಗಳಿಂದ ತಾಯಿ ಮಗ ಹೊರಕ್ಕೆ ಬಾರದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.