ತರಬೇತಿಯಲ್ಲಿದ್ದಾಗಲೇ ಮಹಿಳಾ ಸಬ್​ಇನ್ಸ್​ಪೆಕ್ಟರ್ ಬಂಧನ; ಏನಿದು ಪ್ರಕರಣ?

ತರಬೇತಿಯಲ್ಲಿದ್ದಾಗಲೇ ಮಹಿಳಾ ಸಬ್​ಇನ್ಸ್​ಪೆಕ್ಟರ್ ಬಂಧನ; ಏನಿದು ಪ್ರಕರಣ?

ರ್ಯಾಣ: ತರಬೇತಿ ನಿರತ ಮಹಿಳಾ ಪೊಲೀಸ್ (Trainee Cop) ಅಧಿಕಾರಿಯೊಬ್ಬರು ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧನವಾಗಿದ್ದಾರೆ. ರಾಜಸ್ಥಾನ ಪೊಲೀಸ್‌ನಲ್ಲಿ ಟ್ರೈನಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದ ನೈನಾ ಕನ್ವಾಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸುಮಿತ್ ನಂದಲ್‌ನ ಹುಡುಕಾಟಕ್ಕಾಗಿ ರೋಹ್ಟಕ್‌ನಲ್ಲಿರುವ ಎಸ್‌ಐ ನೈನಾ ಕನ್ವಾಲ್ ಅವರ ಫ್ಲಾಟ್‌ನ ಮೇಲೆ ದೆಹಲಿ ಪೊಲೀಸರು ಗುರುವಾರ ದಾಳಿ ನಡೆಸಿದ್ದರು. ದೆಹಲಿ ಪೊಲೀಸರ ದಾಳಿಯ ಸಮಯದಲ್ಲಿ ಸಬ್ ಇನ್ಸ್‌ಪೆಕ್ಟರ್ ನೈನಾ ಕನ್ವಾಲ್ ಅವರ ಫ್ಲಾಟ್‌ನಲ್ಲಿ ಎರಡು ಪರವಾನಗಿ ಇಲ್ಲದ ಪಿಸ್ತೂಲ್‌ಗಳು ಪತ್ತೆಯಾಗಿವೆ.

ನೈನಾ ಕನ್ವಾಲ್ ಅವರ ಮನೆಯಲ್ಲಿದ್ದ ಎರಡೂ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡ ಪೊಲೀಸರು, ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ. ಬಳಿಕ ರಾಜಸ್ಥಾನ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ಎಸ್. ಸೆಂಗಾಥಿರ್ ಅವರು ಶನಿವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವರದಿಯ ಪ್ರಕಾರ ಕ್ರೀಡಾ ಕೋಟದಲ್ಲಿ ನೈನಾ ಕನ್ವಾಲ್ ಪೊಲೀಸ್ ಇಲಾಖೆಗೆ ನೇಮಕಾತಿ ಹೊಂದಿದ್ದರು.

ಹರಿಯಾಣದ ರೋಹ್ಟಕ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ನೈನಾ ಕನ್ವಾಲ್ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾದ್ದು, ಶಿಸ್ತು ಕ್ರಮದ ಅನ್ವಯ ಅಮಾನತುಗೊಳಿಸಲಾಗಿದೆ' ಎಂದು ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ಎಸ್. ಸೆಂಗಾಥಿರ್ ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)