ಜೆರುಸಲೇಮ್‌ನಲ್ಲಿ ಭಯೋತ್ಪಾದಕನಿಂದ ಗುಂಡಿನ ದಾಳಿ, 7 ಮಂದಿ ಸಾವು

ಜೆರುಸಲೇಮ್ : ಶುಕ್ರವಾರ ಜೆರುಸಲೇಮ್‌ನ ಹೊರವಲಯದಲ್ಲಿರುವ ಸಿನಗಾಗ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇಂದು ಸಂಜೆ ಸುಮಾರು 8:30 ಗಂಟೆಗೆ (1830 GMT) ಭಯೋತ್ಪಾದಕನು ಜೆರುಸಲೆಮ್‌ನ ನೆವ್ ಯಾಕೋವ್ ಬೌಲೆವಾರ್ಡ್‌ನಲ್ಲಿರುವ ಸಿನಗಾಗ್‌ಗೆ ಆಗಮಿಸಿ ಆ ಪ್ರದೇಶದಲ್ಲಿ ಹಲವಾರು ಜನರ ಮೇಲೆ ಗುಂಡು ಹಾರಿಸಿದನು. ಪೊಲೀಸ್ ಪಡೆಗಳು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ್ದ, ಭಯೋತ್ಪಾದಕನ ಮೇಲೆ ಗುಂಡು ಹಾರಿಸಿ, ಅವನನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲಿ ಪೊಲೀಸರು ಈ ದಾಳಿಯನ್ನು 'ಭಯೋತ್ಪಾದಕ ದಾಳಿ' ಎಂದು ಕರೆದಿದೆ. ಈ ಘಟನೆ ಇಲ್ಲಿನ ನೆವ್ ಯಾಕೋವ್‌ನಲ್ಲಿರುವ ಸಿನಗಾಗ್‌ನಲ್ಲಿ ನಡೆದಿದೆ.