ಚುನಾವಣಾ ಅಖಾಡಕ್ಕಿಳಿಯಲು ರೆಡ್ಡಿ ಪತ್ನಿ ತಯಾರಿ.. ಈ ಕ್ಷೇತ್ರದ ಬಿಜೆಪಿ-'ಕೈ'ನಾಯಕರಿಗೆ ಶುರುವಾಗಿದೆ ಟೆನ್ಶನ್..!

ಚುನಾವಣಾ ಅಖಾಡಕ್ಕಿಳಿಯಲು ರೆಡ್ಡಿ ಪತ್ನಿ ತಯಾರಿ.. ಈ ಕ್ಷೇತ್ರದ ಬಿಜೆಪಿ-'ಕೈ'ನಾಯಕರಿಗೆ ಶುರುವಾಗಿದೆ ಟೆನ್ಶನ್..!

ದಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ, ಅವರ ಪತ್ನಿ ಅರುಣಾ ಲಕ್ಷ್ಮೀ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಶುರುವಾಗಿದೆ.

ರಾಜಕೀಯ ಲೆಕ್ಕಾಚಾರಗಳ ಪ್ರಕಾರ ರೆಡ್ಡಿ, ಗಂಗಾವತಿಯಿಂದ ಸ್ಪರ್ಧೆ ಮಾಡಿದ್ರೆ ಪತ್ನಿ ಅರುಣಾ ಲಕ್ಷ್ಮೀ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಂತೆ.

ಹೀಗೊಂದು ಚರ್ಚೆ ಗದಗದಲ್ಲಿ ಶುರುವಾಗಿದೆ. ಅರುಣಾ ಲಕ್ಷ್ಮೀ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಗದಗ ಬಿಜಿಪಿ ಹಾಗೂ ಕಾಂಗ್ರೆಸ್​ ನಾಯಕರಲ್ಲಿ ತಳಮಳ ಶುರುವಾಗಿದೆ ಎನ್ನಲಾಗಿದೆ.