ಚೀನಾದಲ್ಲಿ ಮುಸ್ಲಿಮರಿಗೆ ಉಪವಾಸಕ್ಕೆ ಅವಕಾಶವಿಲ್ಲ
ಪ್ರಪಂಚದಾದ್ಯಂತದ ಮುಸ್ಲಿಮರು ಪವಿತ್ರ ರಂಜಾನ್ ತಿಂಗಳು ಆರಂಭವಾಗಿದ್ದು, ಕೆಲವು ಪ್ರದೇಶಗಳಲ್ಲಿ ಹಬ್ಬದ ಸಿದ್ಧತೆ ಜೋರಾಗಿದೆ ಆದರೆ ಚೀನಾದಲ್ಲಿ ಮುಸ್ಲಿಮರು ಉಪವಾಸ ನಿಷೇಧವನ್ನು ಎದುರಿಸುತ್ತಿದ್ದು, ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳು ದಾಳಿಗೆ ಒಳಗಾಗುತ್ತಿವೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಕ್ಸಿನ್‌ಜಿಯಾಂಗ್‌ನ ವಾಯುವ್ಯ ಪ್ರದೇಶದ ಉಯ್ಘರ್‌ಗಳಿಗೆ ತಮ್ಮ ಮಕ್ಕಳನ್ನು ಉಪವಾಸ ಮಾಡಲು ಬಿಡದಂತೆ ಆದೇಶ ನೀಡಲಾಗುತ್ತಿದೆ, ಅವರ ಪೋಷಕರು ಉಪವಾಸ ಮಾಡುತ್ತಿದ್ದಾರೆಯೇ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ಹಕ್ಕುಗಳ ಗುಂಪುಗಳು ತಿಳಿಸಿವೆ ಎಂದು ಆರ್‌ಎಫ್‌ಎ ವರದಿ ಮಾಡಿದೆ.
"ರಂಜಾನ್ ಸಮಯದಲ್ಲಿ, 1,811 ಹಳ್ಳಿಗಳಲ್ಲಿಅಧಿಕಾರಿಗಳು ಉಯ್ಘರ್ ಕುಟುಂಬಗಳ ಸ್ಪಾಟ್ ಹೋಮ್ ತಪಾಸಣೆ ಸೇರಿದಂತೆ ಒಂದು ಸುತ್ತಿನ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೆ ತರಲು ಯೋಚಿಸುತ್ತಿದ್ದಾರೆ ಎಂದು ವಿಶ್ವ ಉಯ್ಘರ್ ಕಾಂಗ್ರೆಸ್ ವಕ್ತಾರ ದಿಲ್ಶಾತ್ ರಿಶಿತ್ ಹೇಳಿದ್ದಾರೆ ಎಂದು ಆರ್‌ಎಫ್‌ಎ ವರದಿ ಮಾಡಿದೆ.
ರಂಜಾನ್ ಸಮಯದಲ್ಲಿ, ಮುಸ್ಲಿಮರು ಹಗಲು ಹೊತ್ತಿನಲ್ಲಿ ಉಪವಾಸ ಮಾಡುತ್ತಾರೆ. ಚೀನಾದ 11.4 ಮಿಲಿಯನ್ ಹುಯಿ ಮುಸ್ಲಿಮರು ಕಮ್ಯುನಿಸ್ಟ್ ಪಕ್ಷದ ಕಠೋರ ಧಾರ್ಮಿಕ ನಿಯಮಗಳಿಂದಾಗಿ ತಮ್ಮ ಮೂಲ ಶ್ರದ್ಧೆ, ಸಂಪ್ರದಾಯವನ್ನು ಮರೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕೆಲ ಸಂಘಟನೆಗಳು ಹೇಳಿವೆ.