ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ; ಸುಮಲತಾ ಅಂಬರೀಶ್

ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ; ಸುಮಲತಾ ಅಂಬರೀಶ್

ನಿನ್ನೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನೆಮಾದ ಬೊಂಬೆ ಬೊಂಬೆ ಹಾಡು ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ಅನೌಚಿತವಾಗಿ ವರ್ತಿಸಲಾಗಿತ್ತು. ಈ ಕುರಿತಂತೆ ನಟಿ ಸುಮಲತಾ ಅಂಬರೀಶ್ ಟ್ವಿಟ್ ಮಾಡಿದ್ದು ಆಕ್ರೋಶ ಹೊರಹಾಕಿದ್ದಾರೆ. 'ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ ದರ್ಶನ್ ಮೇಲೆ ನಡೆದಿರುವ ಹಲ್ಲೆ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ. ಇಡೀ ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ.