ಚಾಮರಾಜನಗರದಲ್ಲಿ ಶಿಕ್ಷಕರಿಬ್ಬರ ಜಗಳದಿಂದ ಬಾಗಿಲು ಮುಚ್ಚಿದ ಫ್ರೌಢಶಾಲೆ; ಗ್ರಾಮಸ್ಥರ ಆಕ್ರೋಶ

ಚಾಮರಾಜನಗರದಲ್ಲಿ ಶಿಕ್ಷಕರಿಬ್ಬರ ಜಗಳದಿಂದ ಬಾಗಿಲು ಮುಚ್ಚಿದ ಫ್ರೌಢಶಾಲೆ; ಗ್ರಾಮಸ್ಥರ ಆಕ್ರೋಶ

ಚಾಮರಾಜನಗರ: ಪ್ರಸಿದ್ಧವಾಗಿರುವ ಮೇಗಲಹುಂಡಿ ಫ್ರೌಢಶಾಲೆ ಶಿಕ್ಷಕರ ಒಳ ಜಗಳದಿಂದ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಒಂದು ವಾರದಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಶಾಲಾ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣ ಏನು ನೋಡಿದಾಗ ಶಾಲೆಯ ಮಕ್ಕಳಿಗೆ ಜ್ವರ ಕೆಮ್ಮು ಕಾಣಿಸಿಕೊಂಡಿದೆಯಂತೆ ಇದಕ್ಕೆ ಶಾಲೆಯಲ್ಲಿ ಮಕ್ಕಳು ಬೊಂಡ ತಿಂದಿದ್ದರಿಂದ‌ಲೇ ಮಕ್ಕಳಿಗೆ ಜ್ವರ ಬಂದಿದೆ ಎಂದು ಶಾಲೆಯ ಹಿಂದಿ ಶಿಕ್ಷಕ ದುಂಡುಮಹದೇವ ಆರೋಪ ಮಾಡಿದ್ದಾರೆ.

ಇದೇ ತಿಂಗಳು 8 ರಂದು ಶಾಲೆಯಲ್ಲಿ ಗಣಿತ ಹಬ್ಬ ಆಚರಣೆ ಮಾಡಲಾಗಿತ್ತಂತೆ. ಈ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಶಾಲೆ‌ ಮುಖ್ಯಶಿಕ್ಷಕ ಬೊಂಡ ಮಾಡಿಸಿದ್ದರಂತೆ. ಇದರಿಂದ ಮಕ್ಕಳಿಗೆ ಹೀಗಾಗಿದೆ ಎನ್ನುವ ಮೂಲಕ ಮುಖ್ಯ ಶಿಕ್ಷಕರ ದೂರಿದ್ದಾರೆ.ಇದರಿಂದಾಗಿ ಇದೀಗ ಇಡೀ ಶಾಲೆ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಅದೇ ಕ್ಯಾಂಪಸ್​ನಲ್ಲಿ ಇರುವ ಪ್ರೈಮರಿ ಶಾಲೆಯ ಮಕ್ಕಳಿಗೆ ಏಕೆ ಅನಾರೋಗ್ಯ ತಪ್ಪಿಲ್ಲ ಅನ್ನೋ ಪ್ರಶ್ನೆ ಸಹ ಮೂಡಿದೆ. ಈ ಬಗ್ಗೆ ಶಾಲೆ ಮುಖ್ಯಶಿಕ್ಷಕರನ್ನ ಕೇಳಿದ್ರೆ ಅವರು ಹೇಳುವ ಉತ್ತರ ಬೇರೆ ರೀತಿದಾಗಿದೆ.