ಕ್ಷಿಪ್ರವಾಗಿ ಹರಡುವ ಕೋವಿಡ್ ರೂಪಾಂತರದ ಮೊದಲ ಪ್ರಕರಣ ದ.ಆಫ್ರಿಕಾದಲ್ಲಿ ದಾಖಲು

ಕ್ಷಿಪ್ರವಾಗಿ ಹರಡುವ ಕೋವಿಡ್ ರೂಪಾಂತರದ ಮೊದಲ ಪ್ರಕರಣ ದ.ಆಫ್ರಿಕಾದಲ್ಲಿ ದಾಖಲು

ಜೊಹಾನ್ಸ್ಬರ್ಗ್, ಜ.7: ಅತೀ ವೇಗದಲ್ಲಿ ಪ್ರಸರಣಗೊಳ್ಳುವ ಎಕ್ಸ್ಬಿಬಿ.1.5 ಕೋವಿಡ್ ರೂಪಾಂತರದ ಮೊದಲ ಪ್ರಕರಣ ದೇಶದಲ್ಲಿ ಪತ್ತೆಯಾಗಿರುವುದಾಗಿ ದಕ್ಷಿಣ ಆಫ್ರಿಕಾ ಹೇಳಿದೆ. ಎಕ್ಸ್ಬಿಬಿ.1.5 ಅನ್ನು 'ಸಾಂಕ್ರಾಮಿಕ ರೋಗದಲ್ಲಿ ಇದುವರೆಗೆ ಪತ್ತೆಹಚ್ಚಲಾದ ಅತೀ ಕ್ಷಿಪ್ರವಾಗಿ ಹರಡುವ ಉಪತಳಿ' ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಕೋವಿಡ್-19 ತಾಂತ್ರಿಕವಿಭಾಗದ ಮುಖ್ಯಸ್ಥೆ ಮರಿಯಾ ವಾನ್ಕೆರ್ಖೋವ್ ಇತ್ತೀಚೆಗೆ ಹೆಸರಿಸಿದ್ದರು.

ಎಕ್ಸ್ಬಿಬಿ.1.5 ಹರಡುವ ಸಾಮರ್ಥ್ಯಕ್ಕಾಗಿ 'ಸಾಗರಭೂತ ರೂಪಾಂತರಿ' ಎಂದು ಅಡ್ಡಹೆಸರು ಹೊಂದಿದೆ. ಆದರೆ ಇದುವರೆಗೆ ಎಕ್ಸ್ಬಿಬಿ.1.5 ಮತ್ತು ಇತರ ರೂಪಾಂತರಗಳಿಂದ ಉಂಟಾಗುವ ಪ್ರಕರಣಗಳಲ್ಲಿ ತೀವ್ರತೆಯಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ಗುರುತಿಸಲಾಗಿಲ್ಲ. ರೂಪಾಂತರದ ಅಪಾಯದ ಬಗ್ಗೆ ಮುಂಬರುವ ದಿನಗಳಲ್ಲಿ ನವೀಕೃತ ಮೌಲ್ಯಮಾಪನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ. ದಕ್ಷಿಣ ಆಫ್ರಿಕಾದ ಸ್ಟೆಲೆನ್ಬಾಷ್ ವಿವಿಯಲ್ಲಿ ಡಿಸೆಂಬರ್ 7ರಿಂದ ಸಂಶೋಧಕರು ನಡೆಸಿದ ಜಿನ್ ಅನುಕ್ರಮದ ಸಂದರ್ಭ ಈ ರೂಪಾಂತರ ಪತ್ತೆಯಾಗಿದೆ ಎಂದು ವಿವಿಯ ಜೀನ್ ಅನುಕ್ರಮ ಸಂಸ್ಥೆಯ ಮುಖ್ಯಸ್ಥ ಟೂಲಿಯೊ ಡಿಒಲಿವೆರಾ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಎಕ್ಸ್ಬಿಬಿ.1.5 ತ್ವರಿತವಾಗಿ ಪ್ರಬಲ ತಳಿಯಾಗಿ ರೂಪುಗೊಂಡಿದೆ ಮತ್ತು 28 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ ಈ ತಳಿಯ ಸೋಂಕು ಪ್ರಕರಣ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

ಚೀನಾದಲ್ಲಿ ಇದೀಗ ಕೊರೋನದ ಮತ್ತೊಂದು ಅಲೆ ಉಲ್ಬಣಿಸಿದ್ದರೂ, ಎಕ್ಸ್ಬಿಬಿ.1.5 ಸೋಂಕು ಪ್ರಕರಣ ಇದುವರೆಗೆ ದಾಖಲಾಗಿಲ್ಲ ಎಂದು ವರದಿಯಾಗಿದೆ.

.