ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ

ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಗೈಡ್‌ಲೈನ್ಸ್‌ ಪ್ರಕಟಿಸಿದೆ. ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಪಬ್‌, ಬಾರ್‌, ರೆಸ್ಟೋರೆಂಟ್‌, ಸಿನಿಮಾ ಹಾಲ್‌, ಶಾಪಿಂಗ್ ಮಾಲ್‌, ಕಚೇರಿ, ಬಸ್‌, ರೈಲು, ಮೆಟ್ರೋ, ವಿಮಾನಯಾನ ವೇಳೆ ಮಾಸ್ಕ್‌ ಧರಿಸಬೇಕು ಎಂದು ಗೈಡ್​​ಲೈನ್ಸ್​ನಲ್ಲಿ ತಿಳಿಸಲಾಗಿದೆ. ಡಿ. 22ರ ಮಧ್ಯರಾತ್ರಿಯಿಂದಲೇ ಹೊಸ ಗೈಡ್‌ಲೈನ್ಸ್‌ ಅನ್ವಯವಾಗಲಿದೆ.