ಕೊಪ್ಪಳದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ʼಕೆಆರ್ಪಿ ಪಕ್ಷದ ಅಂಬ್ಯುಲೆನ್ಸ್ ಜಪ್ತಿʼ
ಕೊಪ್ಪಳ : ಕನಕಗಿರಿ ಪಟ್ಟಣದಲ್ಲಿ ವಿಧಾನ ಸಭೆ ಚುನಾವಣಾ ನೀತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನಲೆ ಕೆಆರ್ಪಿ ಪಕ್ಷದ ಅಂಬ್ಯುಲೆನ್ಸ್ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಅಭ್ಯರ್ಥಿ ಜನಾರ್ಧನ ರಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಹಾಗೂ ಕನಕಗಿರಿ ಅಭ್ಯರ್ಥಿ ಡಾ.ಚಾರುಲ್ ಭಾವಚಿತ್ರವಿದ್ದ ಅಂಬ್ಯುಲೆನ್ಸ್ ಸಾರ್ವಜನಿಕ ಉಪಯೋಗಕ್ಕಾಗಿ ಅಂಬ್ಯುಲೆನ್ಸ್ ಬಿಡಲಾಗಿತ್ತು.
ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕೊಡಗು ಜಿಲ್ಲೆಯ ಇಬ್ಬರು ಶಾಸಕರು :
ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕರಿಗೆ ಚುನಾವಣಾಧಿಗಳಿಂದ ನೋಟಿಸ್ ಜಾರಿ ಮಾಡಲಾಗಿದೆ.
ಮುಂದಿನ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ರು, ಇಂದು ಶಿವಕುಮಾರ ಶ್ರೀಗಳ ಜನ್ಮ ದಿನಕ್ಕೆ ಸಾಮಾಜಿಕ ಜಾಲತಾಣಗಳಲಿ ಶುಭಾಶಯ ಕೋರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ, ಈ ವಿಚಾರವಾಗಿ ಕಾರಣ ಕೇಳಿ ಅಪ್ಪಚ್ಚು ರಂಜನ್ಗೆ ಚುನಾವಣಾಧಿಗಳಿಂದ ನೋಟಿಸ್ ಜಾರಿ ಮಾಡಿದ್ದಾರೆ .
ಅಷ್ಟೇ ಅಲ್ಲದೇ ಕೆ.ಜಿ ಬೊಪಯ್ಯ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಶುಭಹಾರೈಸಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೊಪಯ್ಯಗೆ ಚುನಾವಣಾಧಿಗಳಿಂದ ನೋಟಿಸ್ ಜಾರಿ ನೀಡಿದ್ದಾರೆ ಎಂದು ವರದಿಯಾಗಿದೆ.