ಕೆಆರ್ಪಿಪಿಯಿಂದ ಕಾಂಗ್ರೆಸ್ಗೂ ಹೊಡೆತ; ಪಕ್ಷ ಬಿಡಲು ಸಜ್ಜಾದ ನಾಯಕರು

ಕೊಪ್ಪಳ: ಕಾಂಗ್ರೆಸ್ ತೊರೆದು ಕೆಆರ್ಪಿಪಿ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಕ್ಬಾಲ್ ಅನ್ಸಾರಿಗೆ ತಲೆ ಬಿಸಿ ಶುರುವಾಗಿದೆ. ಪಕ್ಷ ತೊರೆಯುತ್ತಿರುವವರ ಜೊತೆ ಹೋಗದಂತೆ ಕಾರ್ಯಕರ್ತರಲ್ಲಿ ಅನ್ಸಾರಿ ಮನವಿ ಮಾಡುತ್ತಿದ್ದಾರೆ.
ವಾಯ್ಸ್ ರೆಕಾರ್ಡ್ ಮೂಲಕ ಮನವಿ ಮಾಡಿ ಬಿಡುಗಡೆ ಮಾಡಿದ ಇಕ್ಬಾಲ್ ಅನ್ಸಾರಿ, ತನ್ನ ಪಕ್ಷದ ಕಾರ್ತಯಕರ್ತರನ್ನು ನಿಯಂತ್ರಣದಲ್ಲಿ ಇಡಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಉದಾಹರಣೆ ನೀಡುವುದಾದರೆ, ಕಾಂಗ್ರೆಸ್ ತೊರೆದು ರೆಡ್ಡಿ ಪಕ್ಷ ಸೇರ್ಪಡೆಗೆ ಮಲ್ಲೆಶಪ್ಪ ಚಿಲಕಮುಕಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲೆಶಪ್ಪ ಚಿಲಕಮುಕಿ ಪೋನ್ ರಿಸಿವ್ ಮಾಡದಂತೆ ಕಾರ್ಯಕರ್ತರಿಗೆ ಅನ್ಸಾರಿ ಸೂಚನೆ ನೀಡಿದ್ದಾರೆ.
ಒಂದು ಕಡೆ ಪಕ್ಷ ತೊರೆಯುವವರ ಜೊತೆ ಸಭೆ ನಡೆಸದಂತೆ, ಹಾಗೂ ಪಕ್ಷ ಬಿಟ್ಟು ಹೋಗದಂತೆ ವಾಯ್ಸ್ ರೆಕಾರ್ಡ್ ಮೂಲಕ ಅನ್ಸಾರಿ ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ರೆಡ್ಡಿ ಗಾಳ ಹಾಕುತ್ತಿದ್ದಾರೆ.