ಕುಡಿದು ಬಂದು ಜಗಳಕ್ಕೆ ನಿಂತ ವ್ಯಕ್ತಿ ಒಂದೇ ಏಟಿಗೆ ಪ್ರಾಣ ಕಳೆದುಕೊಂಡ!
ಬೆಂಗಳೂರು: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು ಹತ್ಯೆ ಹಿಂದಿನ ಅಸಲಿ ಕಹಾನಿ ಬಯಲಾಗಿದೆ. ವಿಚಿತ್ರ ಎಂದರೆ ಈ ಪ್ರಕರಣದಲ್ಲಿ ಇಬ್ಬರೂ ಹೊಡೆದಾಡಿಕೊಂಡಿಲ್ಲ.
ದ್ವಿಚಕ್ರ ವಾಹನದಲ್ಲಿದ್ದ ಹೇಮಂತ್ ಹಾಗೂ ಸ್ನೇಹಿತನ ಜೊತೆಗೆ ಜಗಳಕ್ಕೆ ಜಗದೀಶ್ ಎನ್ನುವಾತ ಬಂದಿದ್ದಾನೆ.
ತನ್ನ ಪರಿಚಿತ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದಾಗ ನಶೆಯಲ್ಲಿದ್ದ ಜಗದೀಶ್ ಎನ್ನುವಾತ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದ ಹೇಮಂತ್ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಕೋಪಗೊಂಡ ಹೇಮಂತ್, ಜಗದೀಶ್ನ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಒಮ್ಮೆಲೆ ಕುಸಿದು ಬಿದ್ದ ಜಗದೀಶ್, ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.