ಕಾಂತಾರ' ಸಿನಿಮಾ ಸ್ಟೈಲ್ ನಲ್ಲಿ 'ವಿವಾಹಿತ ಮಹಿಳೆʼಯನ್ನೇ ಮದುವೆ ಆಗ್ತೀನಿ ಎಂದ ʼದೈವ ನರ್ತಕʼ..!

ಕಾರವಾರ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನೇ ದೈವ ನರ್ತಕ ಮದುವೆಯಾಗುವುದಾಗಿ ಅಭಯ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅಂಬಾರಕೊಡ್ಲೆನಲ್ಲಿ ನಡೆದಿದೆ.
ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳಲು ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ ಮೂಲದ ಮಹಿಳೆಯನ್ನು ಮದುವೆಯಾಗುವುದಾಗಿ ದೈವ ನರ್ತಕ ನುಡಿದಿದ್ದು, ಅಲ್ಲಿ ನೆರೆದಿದ್ದವರು ಶಾಕ್ ಆಗಿದ್ದಾರೆ.
ಏನಿದು ಘಟನೆ
ಮಹಿಳೆಯೊಬ್ಬಳು ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದು,. ದೈವದ ಹೆಸರಿನಲ್ಲಿ ಅಭಯವಿತ್ತ ನರ್ತಕ ನಿನ್ನನ್ನು ಮದುವೆ ಆಗುತ್ತೇನೆ ಎಂದು ನಂಬಿಸಿದ್ದಾನೆ. ಇಂಟರೆಸ್ಟಿಂಗ್ ವಿಚಾರ ಅಂದರೆ ಮಹಿಳೆಗೆ ಮದುವೆಯಾಗಿದ್ದು, ಗಂಡನಿಂದ ದೂರವಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ನರ್ತಕ ಸಹ ಪತ್ನಿಯಿಂದ ದೂರವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಇದು ಸತ್ಯ ಸತ್ಯ ಎಂದು ದೈವದ ಪಾತ್ರಧಾರಿ ಕೂಗಿದೆ. ಘಟನೆಯಿಂದ ಅಲ್ಲಿ ನೆರೆದಿದ್ದವರು ಒಂದು ಕ್ಷಣ ಶಾಕ್ ಆಗಿದ್ದಾರೆ. ವಿವಾಹಿತ ಮಹಿಳೆಯನ್ನ ವರೆಸುವ ಸಲುವಾಗಿ ದೈವದ ಹೆಸರನ್ನ ನರ್ತಕ ಬಳಿಸಿಕೊಂಡನೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.