ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿಲ್ವಾ?: ಹೆಚ್ ಡಿಕೆ ಪ್ರಶ್ನೆ

ವಿಜಯಪುರ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಗಳು ಶುರುವಾಗಿದೆ. ಇದೀಗ ವಿಜಯಪುರದಲ್ಲಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿ, ಇಂದು ರಾಜ್ಯದಲ್ಲಿ ಈ ಸರ್ಕಾರ ಬರುವುದಕ್ಕೆ ಕಾರಣ ಯಾರು? ಈ ಬಗ್ಗೆ ಅವರೇ ಪ್ರಶ್ನೆ ಮಾಡಿಕೊಳ್ಳಬೇಕೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿಲ್ವಾ? ಎಂದು ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದ್ದಾರೆ.ನಮ್ಮ ದೇಶದ ಸಂಪತ್ತು ಕೇವಲ 166ಜನರ ಕೈಯಲ್ಲಿದೆ. ಕೊವಿಡ್ ಗೂ ಮುನ್ನ 106 ಇತ್ತು ಇದೀಗ 166ಕ್ಕೆ ಏರಿಕೆಯಾಗಿದೆ. ಬಡವರ ಆದಾಯ ಹೆಚ್ಚಿಸುವುದಕ್ಕೆ ಪಂಚರತ್ನ ಯಾತ್ರೆ ಮೂಲ ಉದ್ದೇಶವಾಗಿದೆ. ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷವನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ವಾಗ್ದಾಳಿ ನಡೆಸಿದ್ದಾರೆ. ಕರಾವಳಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಘೊಷಣೆ ಮಾಡಿದೆ. ಅವರು ಈಗ ಒಂದೊಂದು ಏರಿಯಾಗೆ ಒಂದೊಂದು ಪ್ರಣಾಳಿಕೆ ಮಾಡಿಕೊಂಡು ಹೊರಟಿದ್ದಾರೆ. 5 ವರ್ಷದ ಆಡಳಿತದಲ್ಲಿ ಏನು ಕೊಟ್ಟಿದ್ದೇವೆ, ಏನು ಕೊಡುತ್ತೇವೆ ಅನ್ನೋದನ್ನ ಹೇಳಬೇಕಲ್ಲ. ಪ್ರಣಾಳಿಕೆ ಮಾಡೋದು ಬೇರೆ. 5 ಮತ್ತು 2 ಕಾಂಗ್ರೆಸ್ ಪಕ್ಷದ ಏನು ಕೊಟ್ಟಿದೆ ಎಂದು ಹೆಚ್ಡಿಕೆ ಪ್ರಶ್ನಿಸಿದರು.