ಕಂದಾಯ ಇಲಾಖೆ ಸಿಬ್ಬಂದಿ ವರ್ಗಾವಣೆ'ಗೆ ರಾಜ್ಯ ಸರ್ಕಾರ ಬ್ರೇಕ್
ಬೆಂಗಳೂರು : ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಅಧಿಕಾರಿ/ನೌಕರರ ವರ್ಗಾವಣೆಗೆ ಬ್ರೇಕ್ ಹಾಕಿದ್ದು, ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಮೇ. 2023 ರವರೆಗೆ ವರ್ಗಾವಣೆ ಮಾಡದಂತೆ ಕಂದಾಯ ಇಲಾಖೆ ಸರ್ಕಾರದ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ನೋಂದಣಿ, ಪರಿಷ್ಕರಣೆ ಕಾರ್ಯ ಹಾಗೂ ಇತರೆ ಚುನಾವಣೆ ಸಂಬಂಧಿ ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ತಹಸೀಲ್ದಾರ್, ಉಪ ತಹಸೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಿಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆ/ಒಒಡಿ ಮತ್ತು ವರ್ಗಾವಣೆ ಮಾಡುವುದರಿಂದ ಚುನಾವಣೆ ಕೆಲಸಕ್ಕೆ ಆಡಚಣೆ ಉಂಟಾಗಲಿದೆ. ಹೀಗಾಗಿ ಸಿಎಂ, ಕಂದಾಯ ಸಚಿವರಿಂದ ಅನುಮೋದನೆಗೊಂಡಿರುವ ವರ್ಗಾವಣೆ ಅಥವಾ ನಿಯೋಜನೆ ಒಒಡಿ ಪ್ರಸ್ತಾವನೆಗಳನ್ನು ಮಾತ್ರ ಸರ್ಕಾರದ ಕಾರ್ಯದರ್ಶಿಗೆ ಕಡತ ಮಂಡಿಸುವುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.