ರಾಮನಗರದಲ್ಲಿ ʼಚಿರತೆ ದಾಳಿ ತಪ್ಪಿಸಲು ಮರವೇರಿದ ಯುವತಿʼ : ಇಳಿಯುವಾಗ ಬಿದ್ದು ʼಕಾಲಿಗೆ ಗಂಭೀರ ಗಾಯ

ರಾಮನಗರದಲ್ಲಿ ʼಚಿರತೆ ದಾಳಿ ತಪ್ಪಿಸಲು ಮರವೇರಿದ ಯುವತಿʼ : ಇಳಿಯುವಾಗ ಬಿದ್ದು ʼಕಾಲಿಗೆ ಗಂಭೀರ ಗಾಯ

ರಾಮನಗರ : ಮಾಗಡಿ ತಾಲೂಕಿನ ಮರಳುದೇವನ ಪುರ ಗ್ರಾಮದಲ್ಲಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳೋದಕ್ಕೆ ಬಾಲಕಿ ಮರವೇರಿದಾಗ ಬಿದ್ದ, ಗಂಭೀರ ಗೊಂಡ ಘಟನೆ ಬೆಳಕಿಗೆ ಬಂದಿದೆ.

ಹೊಲದಲ್ಲಿ ಕುರಿ ಕಾಯುತ್ತಿದ್ದಾಗ ಚಿರತೆ ಪ್ರತ್ಯಕ್ಷಗೊಂಡಿತು. ಈ ವೇಳೆ ಭಯಪಟ್ಟು ದಾಳಿ ಯಿಂದ ತಪ್ಪಿಸಲು ಭರದಲ್ಲಿ ಯುವತಿಯೊಬ್ಬಳು ಸರಸರನೇ ಮರವೇರಿದಳು. ಬಳಿಕ ಇಳಿಯವಾಗ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡರು, ಚಿರತೆ ದಾಳಿಯಿಂದ ಎಸ್ಕೇಪ್‌ ಆಗಿದ್ದಾಳೆ.

ಮರಳುದೇವನಪುರ ಗ್ರಾಮದ ವಿಜಯಲಕ್ಷ್ಮಿ ಚಿರತೆಯಿಂದ ಪಾರಾದ ಯುವತಿ ಎಂದು ಗುರುತಿಸಲಾಗಿದೆ. ಮಾಗಡಿ ಆಸ್ಪತ್ರೆಯಲ್ಲಿ ಗಾಯಗೊಂಡ ವಿಜಯಲಕ್ಷ್ಮಿ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ಸೆರೆಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗಂಭೀರ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದೆ.