ಇಂದು ಕಲಬುರಗಿಗೆ ಸಿಎಂ ಬೊಮ್ಮಾಯಿ : `ವಿವೇಕ ಯೋಜನೆ'ಗೆ ಚಾಲನೆ

ಇಂದು ಕಲಬುರಗಿಗೆ ಸಿಎಂ ಬೊಮ್ಮಾಯಿ : `ವಿವೇಕ ಯೋಜನೆ'ಗೆ ಚಾಲನೆ

ಲಬುರಗಿ : ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿಗೆ ಭೇಟಿ ನೀಡಲಿದ್ದು, 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಸಿಎಂ ಬೊಒಮ್ಮಾಯಿ ಸರಡಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ವಿಮಾನ ನಿಲ್ದಾಣದಿಂದ ಕಲಬರುಗಿ ತಾಲೂಕಿನ ಮಡಿಯಾಳ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ದಿನಾಚರಣೆ ಹಾಗೂ ವಿವೇಕ ಯೋಜನೆಗೆ ಚಾಲನೆಗೆ ನೀಡಲಿದ್ದಾರೆ.

ಬಳಿಕ ಸಿಎಂ ಬೊಮ್ಮಾಯಿ ಅವರು ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಸಂಜೆ 3.50 ಕ್ಕೆ ಕಲಬರುಗಿಯ ಸರಡಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಹೋಗಲಿದ್ದಾರೆ.

ಸಿಎಂ ಬೊಮ್ಮಾಯಿಗೆ ಕಲಬುರಗಿಯಲ್ಲಿ `ಪೇ ಸಿಎಂ' ಪೋಸ್ಟರ್ ಶಾಕ್

ಕಾಂಗ್ರೆಸ್‌ ಪೇ ಸಿಎಂ ಪೋಸ್ಟರ್‌ ಅಭಿಯಾನ ಮತ್ತೆ ಭುಗಿಲೆದ್ದಿದೆ. ಇಂದು ಕಲಬುರಗಿ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಗಮೇಶ್ವರ ನಗರ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಪೋಸ್ಟರ್​ಗಳನ್ನು ಅಂಟಿಸಿದ್ದಾರೆ. ವಾರದ ಹಿಂದೆ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಪೋಸ್ಟರ್ ಹಾಕಿದ್ದರು. ಇದಕ್ಕೆ ಪೇ ಸಿಎಂ ಪೋಸ್ಟರ್‌ ತಿರುಗೇಟು ನೀಡಿದ್ದಾರೆ.