ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನೆಲೆ: ನಾಲ್ವರು IPS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಆದೇಶ ಹೊರಡಿಸಿರುವ ಸರ್ಕಾರವು, ಸಿಐಡಿ ಎಸ್ಪಿಯಾಗಿ ಸವಿತಾ .ಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ
ಪೊಲೀಸ್ ತರಬೇತಿ ಕೇಂದ್ರ ಕಲಬುರಗಿಯ ಉಪ ಪ್ರಾಂಶುಪಾಲರಾಗಿ ಆರುಣ್ .ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೌಮ್ಯಲತಾ ಎಸ್ ಅವರನ್ನು ಕೆ, ಎಸ್ ಪಿ ರೈಲ್ವೇಸ್ ಬೆಂಗಳೂರು, ಮತ್ತು ಸಚಿನ್ ಘೋರ್ಪಡೆ ಅವರನ್ನು ಬೆಂಗಳೂರು ಉತ್ತರ ವಿಭಾಗ ಸಂಚಾರ ಡಿಸಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಬೆಂಗಳೂರಿನಲ್ಲಿ ಆದೇಶ ಹೊರಡಿಸಿದೆ.