MLC ರವಿಕುಮಾರ್ ಸಿಡಿ'ಯಲ್ಲಿ ಎಕ್ಸ್ ಪರ್ಟ್, ವಿಜಯಸಂಕಲ್ಪ ಯಾತ್ರೆ ಬದಲು ಸಿಡಿಯಾತ್ರೆ ಮಾಡಿ: HDK ಟಾಂಗ್

MLC ರವಿಕುಮಾರ್ ಸಿಡಿ'ಯಲ್ಲಿ ಎಕ್ಸ್ ಪರ್ಟ್, ವಿಜಯಸಂಕಲ್ಪ ಯಾತ್ರೆ ಬದಲು ಸಿಡಿಯಾತ್ರೆ ಮಾಡಿ: HDK ಟಾಂಗ್

ಬೆಂಗಳೂರು: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೇ 65 ವರ್ಷ ಮೇಲ್ಪಟ್ಟ ತಂದೆ ತಾಯಿಗೆ ಪ್ರತೀ ತಿಂಗಳು 5 ಸಾವಿರ ನೀಡಲಾಗುತ್ತದೆ. ಮದುವೆಯಾಗದ ಮಹಿಳೆಗೆ 2 ಸಾವಿರ ನೀಡಲಾಗುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಇಂದು ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಚಿಕ್ಕಬಾಣಾವಾರದ ಬಳಿ ಮಾತನಾಡಿದಂತ ಅವರು, ನೀವು ಅಶೋಕ್ ಅವರಿಗೂ ಆಶಿರ್ವಾದ ಮಾಡಿದ್ದೀರಿ. ಬಿಜೆಪಿಗೆ ಆಶಿರ್ವಾದ ಮಾಡಿದ್ದೀರಿ. ಅಭಿವೃದ್ಧಿ ಬಿಟ್ಟು, ಲೂಟಿ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಈಗ ಭ್ರಷ್ಟಾಚಾರದ ಸರ್ಕಾರ ಅಂತ ಹೇಳ್ತಿದ್ದೀರಾ. ಹಿಂದೆಯೇ ನಾನು ಇವರ ಭ್ರಷ್ಟಾಚಾರ ಬಗ್ಗೆ ಹೇಳಿದ್ದೇನೆ. ಚಿಕ್ಕಬಾಣಾವರ ಕೆರೆ ಬಗ್ಗೆ ಹೇಳಿದಾಗ, ಲೂಡಲೇ ಹಣ ಬಿಡುಗಡೆ ಮಾಡಿದೆ. ಕೆರೆಯಿಂದ ವಾಸನೆ ಬರ್ತಿರೋ ಬಗ್ಗೆ ಆರೋಪ ಇತ್ತು ಎಂದರು.

ಈ ಬಾರಿ ಜನತಾದಳ ಸ್ಪಷ್ಟವಾದ ಸರ್ಕಾರ ಬರಲು ಆಶೀರ್ವಾದ ಮಾಡಿದ್ದಾರೆ. ಮಂಜಣ್ಣ ಅವರನ್ನ ಮಂತ್ರಿ ಮಾಡುತ್ತೇನೆ. ಮೇ ತಿಂಗಳ ಒಳಗಾಗಿ ನಿಮ್ಮ ದಾಸರಹಳ್ಳಿಯ ಪ್ರತೀ ರಸ್ತೆಗಳು ಸಿಸಿ ರಸ್ತೆಗಳಾಗಬೇಕು. ಮನೆ ಇಲ್ಲದವರಿಗೆ ಸ್ವಂತ ಮನೆ ಕೊಡ್ತೀವಿ. ಹೂ, ತರಕಾರಿ ಮಾರುವವರಿಗೆ ಸ್ವಂತ ಮನೆ ಕಟ್ಟಿ ಕೊಡ್ತೇನೆ. ಒಂದು ಅವಕಾಶವನ್ನ ನಮ್ಮ ಅಭ್ಯರ್ಥಿ, ನಮ್ಮ ಪಕ್ಷಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.

ಪಂಚರತ್ನ ಯಾತ್ರೆ ಸಂಪೂರ್ಣ ಚಿತ್ರಣ ನೋಡಿದ್ದೀರಾ. ರಿಸೀವ್ ಮಾಡಿಕೊಳ್ತಿದ್ದಾರೆ. ದಾಸರಹಳ್ಳಿಯಲ್ಲಿ, ಬೆಂಗಳೂರಿನ 15 ಕಡೆ ಪ್ರವಾಸ ಮಾಡಬೇಕಿದೆ. ಆದ್ರೆ ಸಮಯದ ಅಭಾವ ಇದೆ ಎಂದರು.

MLC ರವಿಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದಂತ ಅವರು, ಸಿಡಿಯಲ್ಲಿ ಅವರು ಎಕ್ಸ್‌ಪರ್ಟ್ಸ್ ಇದ್ದಾರೆ. ವಿಜಯಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಿ. ಅದನ್ನ ತೋರಿಸಿಕೊಂಡು ಓಡಾಡಿ. ಬಿಜೆಪಿ ಈ ರಾಜ್ಯಲೂಟಿ ಮಾಡಿದ್ದಾರೆ. ಬಜೆಪಿಯನ್ನ ರಾಜ್ಯದಿಂದ ಹೊರಗೆ ಕಳಿಸಲಿದ್ದಾರೆ. ನಾಲ್ಕು ವರ್ಷದ ಹಿಂದೆ ಸಿಡಿ ಯಾತ್ರೆ ಮಾಡಿ ಅಂತ ಹೇಳಿದ್ದೆ. ಮುನಿರತ್ನ ಇದ್ದಾರಲ್ಲ ಅವರಿಗೆ ಹೇಳಿ ಒಂದು ಸ್ಕ್ರೀನ್ ರೆಡಿ ಮಾಡ್ತಾರೆ ಎಂದು ಟಾಂಗ್ ನೀಡಿದರು.