'LPG ಸಿಲಿಂಡರ್'ಗಳ ಬೆಲೆ ಇಳಿಕೆಗೆ 'ಕೇಂದ್ರ ಸರ್ಕಾರ' ಸಜ್ಜು
ನವದೆಹಲಿ: ದುಬಾರಿ LPG ಸಿಲಿಂಡರ್ಗಳ ಭಾರ ಎದುರಿಸುತ್ತಿರುವ ಜನರು ಹೊಸ ವರ್ಷದಲ್ಲಿ ದೊಡ್ಡ ಪರಿಹಾರವನ್ನ ಪಡೆಯಬಹುದು. ಈ ವರ್ಷದ ಜುಲೈನಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30ರಷ್ಟು ಕಡಿಮೆಯಾಗಿದೆ. ಆದ್ರೆ, ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂಪಾಯಿ ಇದೆ. ಹೀಗಾಗಿ ಹೊಸ ವರ್ಷದಲ್ಲಿ, ಎಲ್ಪಿಜಿ ಬೆಲೆಯಲ್ಲಿ ಕೇಂದ್ರ ಸರ್ಕಾರವು ದೊಡ್ಡ ರಿಯಾಯಿತಿಯನ್ನ ಘೋಷಿಸಬಹುದು ಎನ್ನಲಾಗ್ತಿದೆ.