KSRTC' ಚಾಲಕ, ನಿರ್ವಾಹಕ ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

ಕಲಬುರಗಿ : ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕ 925 ಹುದ್ದೆ ಹಾಗೂ ಚಾಲಕ-ಕಂ-ನಿರ್ವಾಹಕ-694 ಹುದ್ದೆಗಳು ಸೇರಿದಂತೆ ಒಟ್ಟು 1619 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಕೊನೆಯ ಅವಕಾಶ ನೀಡಿ, ಇದೇ ಫೆಬ್ರವರಿ 24 ರಿಂದ 28 ರವರೆಗೆ (ಭಾನುವಾರ ಹೊರತುಪಡಿಸಿ) ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಹಾಜರಾಗಲು ಪುನ: ಅವಕಾಶ ಕಲ್ಪಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಕರೆಪತ್ರ ಕಳುಹಿಸಲಾಗಿರುವ ಹಲವಾರು ಅಭ್ಯರ್ಥಿಗಳು ಈವರೆಗೂ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಲ್ಲದೇ ಇನ್ನೂ ಕೆಲವು ಅಭ್ಯರ್ಥಿಗಳು ವಿವಿಧÀ ಕಾರಣಗಳನ್ನು ತಿಳಿಸಿ/ ಅರ್ಣ ದಾಖಲಾತಿಗಳೊಂದಿಗೆ ಹಾಜರಾಗಿ ಬೇರೆ ದಿನಾಂಕಗಳಂದು ಪೂರ್ಣ ದಾಖಲಾತಿಗಳೊಂದಿಗೆ ಹಾಜರಾಗುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಇದುವರೆಗೆ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳು ನಿಗಮದ kkrtcjobs.karnataka.gov.in/call2020 ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಕಲಬುರಗಿ ನಗರದ ಆರ್ಚಿಡ್ ಮಾಲ್ನ ಸಮೀಪವಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಮೂಲ ದಾಖಲೆಗಳಪರಿಶೀಲನೆಗಾಗಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.
ಮೂಲ ದಾಖಲೆಗಳ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಇದೊಂದು ಕೊನೆಯ ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಒಂದು ವೇಳೆ ಸದರಿ ದಿನಗಳಂದು ಹಾಜರಾಗದೇ ಇದ್ದ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಪರಿಶೀಲನೆಗೆ ಅವಕಾಶ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ನಿಗಮದ ಸಹಾಯವಾಣಿ ಮೊಬೈಲ್ ಸಂಖ್ಯೆ 6366374977 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 08472-227687ಗೆ ಸಂಪರ್ಕಿಸಲು ಕೋರಲಾಗಿದೆ.
ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 925- ಚಾಲಕ ಮತ್ತು 694-ಚಾಲಕ-ಕಂ-ನಿರ್ವಾಹಕ ಒಟ್ಟು 1619 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ದಿನಾಂಕ: 05.12.2022 ರಿಂದ ಪ್ರಾರಂಭವಾಗಿ 23.02.2023 ರವರೆಗೆ ನಡೆಸಲಾಗಿತ್ತೆಂದು ಅವರು ತಿಳಿಸಿದ್ದಾರೆ.