IPS ಡಿ.ರೂಪ vs IAS ರೋಹಿಣಿ ಕಿತ್ತಾಟ; ಡ್ಯಾಮೇಜ್ ಕಂಟ್ರೋಲ್​​ಗೆ ಸಿಎಂ ನೀಡಿದ ಖಡಕ್ ಸೂಚನೆಯೇನು?

IPS ಡಿ.ರೂಪ vs IAS ರೋಹಿಣಿ ಕಿತ್ತಾಟ; ಡ್ಯಾಮೇಜ್ ಕಂಟ್ರೋಲ್​​ಗೆ ಸಿಎಂ ನೀಡಿದ ಖಡಕ್ ಸೂಚನೆಯೇನು?

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಕಿತ್ತಾಟ ಬೀದಿಗೆ ಬಂದಿದ್ದು, ಹೀಗೆಯೇ ಮುಂದುವರಿದರೆ ಸರ್ಕಾರದ ವರ್ಚಸ್ಸಿಗೆ ಹಾನಿಯಾಗಲಿದೆ ಎಂದು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

ಇಬ್ಬರನ್ನೂ ಕೂಡಿಸಿ ಇಲ್ಲವೇ ಪ್ರತ್ಯೇಕವಾಗಿ ಕರೆದು ಮಾತನಾಡಿ ಸ್ಪಷ್ಟೀಕರಣ ಪಡೆದು ಕಿವಿಮಾತು ಹೇಳಿ ಕಳುಹಿಸಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸಿಎಂ ಬೊಮ್ಮಾಯಿ‌ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಬ್ಬರೂ ಕಳೆದ 24 ಗಂಟೆಯಿಂದ ಪರಸ್ಪರ ದೋಷಾರೋಪಣೆಗೆ ಇಳಿದಿದ್ದು, ಕಾರ್ಯಾಂಗದ ಕ್ಷಮತೆ ಮೇಲೆ ಪರಿಣಾಮ ಬೀರಲಿದೆ‌. ಐಪಿಎಸ್, ಐಎಎಸ್ ಹುದ್ದೆಯ ಘನತೆ-ಗೌರವ ಜನಸಾಮಾನ್ಯರ ದೃಷ್ಟಿಯಲ್ಲಿ ಕುಸಿಯಲಿದೆ. ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗಲಿದೆ ಎಂದು ಸಿಎಂ ಬೊಮ್ಮಾಯಿ‌ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಡಿ.ರೂಪಾ ಅವರು 19 ಪ್ರಶ್ನೆಗಳನ್ನೆತ್ತಿದ್ದು, ರೋಹಿಣಿ ಸಿಂಧೂರಿ ಸೇವಾ‌ ನಡವಳಿಕೆ ವಿರುದ್ಧ ಸರ್ಕಾರಕ್ಕೆ ದೂರು ನೀಡಿರುವುದಾಗಿ ಹೇಳಿದ್ದರೆ, ಕಾನೂನು ಹೋರಾಟ ನಡೆಸುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಸಿ, ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿರುವೆ ಎಂದಿದ್ದಾರೆ.