60 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಅಕ್ರಮ ಮಾಡಿದ್ರೆ ಸರ್ಕಾರ ತನಿಖೆ ನಡೆಸಲಿ : ಸಿದ್ದರಾಮಯ್ಯ ಸವಾಲ್

60 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಅಕ್ರಮ ಮಾಡಿದ್ರೆ ಸರ್ಕಾರ ತನಿಖೆ ನಡೆಸಲಿ : ಸಿದ್ದರಾಮಯ್ಯ ಸವಾಲ್

ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ಸಿದ್ದರಾಮಯ್ಯ ಸವಾಲಿನ ಮೇಲೆ ಸವಾಲ್ ಹಾಕುತ್ತಿದ್ದಾರೆ. ಕಾಂಗ್ರೆಸ್ 60 ವರ್ಷದ ಅವಧಿಯಲ್ಲಿ ಅಕ್ರಮ ಮಾಡಿದ್ರೆ ಅದನ್ನು ಬಿಜೆಪಿ ಸರ್ಕಾರ ತನಿಖೆ ಮಾಡಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.

60 ವರ್ಷ ಕಾಂಗ್ರೆಸ್ ಸಾಧನೆ ಭ್ರಷ್ಟಾಚಾರ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದ ಸಚಿವ ಕೆ.ಸುಧಾಕರ್ ಹೇಳಿಕೆಗೆ ಸಿದ್ದು ತಿರುಗೇಟು ನೀಡಿದ್ದಾರೆ.

ಕೊರೊನಾ ಸಮಯದಲ್ಲಿ ಲೂಟಿ ಮಾಡಿದವರು ಯಾರು? ಲಸಿಕೆ, ಔಷಧಿ, ಬೆಡ್ನಲ್ಲಿ ಹಣ ಮಾಡಿದ್ದು ಇವರೇ ಅಲ್ಲವೇ? ಎಂದು ಆರೋಪಿಸಿದ್ದಾರೆ. 60 ವರ್ಷ ಅಕ್ರಮ ಮಾಡಿದ್ರೆ ತನಿಖೆ ನಡೆಸಲಿ. ಈ ಸರ್ಕಾರದಲ್ಲಿ ಲಂಚ ಇಲ್ಲದೆ ಏನು ಆಗ್ತಿಲ್ಲ. ಎಲ್ಲಾ ಕಡೆ ಲಂಚ, ಲಂಚ, ಲಂಚ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.