6ನೇ ಬಾರಿಗೆ ಫೈನಲ್ಗೇರಿದ ಅರ್ಜೆಂಟೀನಾ!
ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಅರ್ಜೆಂಟೀನಾ ಎಂಟು ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ 6ನೇ ಬಾರಿಗೆ ಫಿಪಾ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ತಂಡದ ಪರ ಲಿಯೋನೆಲ್ ಮೆಸ್ಸಿ ಒಂದು ಗೋಲು & ಜೂಲಿಯಾನ್ ಅಲ್ವಾರೆಜ್ ಎರಡು ಗೋಲು ಬಾರಿಸಿ ಗೆಲುವಿನ ಹೀರೋ ಎನಿಸಿಕೊಂಡರು.