ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ..16 ಲಕ್ಷ ರೂ.ಬೆಲೆ ಬಾಳುವ ಸೀರೆಗಳು ವಶಕ್ಕೆ

ಬೆಳಗಾವಿ: ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ಪೋಲೀಸರು ದಾಖಲೆ ಇಲ್ಲದೇ ಬೆಳಗಾವಿಯಲ್ಲಿ ಸಾಗಿಸುತ್ತಿದ್ದ ಹಣ ಹಾಗೂ ಸದಲಗಾ ದತವಾಡ ಚೆಕ್ ಪೋಸ್ಟ್‌ನಲ್ಲಿ ಸೀರೆಗಳ ಜಪ್ತಿ ಪಡೆಯಲಾಗಿದೆ.
ಬೆಳಗಾವಿ ನಗರದ ಹೊರ ವಲಯದ ಕಣಬರಗಿ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂ.
ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳ ಜಪ್ತಿ: ಚಿಕ್ಕೋಡಿಯ ಸದಲಗಾ ದತವಾಡ ಚೆಕ್ ಪೋಸ್ಟ್‌ನಲ್ಲಿ ಸೀರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 16 ಲಕ್ಷ ಬೆಲೆ ಬಾಳುವ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಬಾಗ ಮತಕ್ಷೇತ್ರದಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಸೀರೆಗಳು ಎನ್ನಲಾಗಿದೆ. ವಾಹನ ಚಾಲಕ ಹಾಗೂ ಕ್ಲೀನರ್ ವಾಹನವನ್ನೂ ವಶಕ್ಕೆ ಪಡೆದ ಪೊಲೀಸರು. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.