14 ನೇ ಮಹಡಿಯಿಂದ ಜಿಗಿದು ಸಾಯಲು ಹೋದ ವ್ಯಕ್ತಿ; ಆಮೇಲೇನಾಯ್ತು ಗೊತ್ತೇ?
ನೋಯ್ಡಾ:ತನ್ನ ಗೆಳತಿಯೊಂದಿಗೆ ಜಗಳವಾಡಿದ ನಂತರ ಅಂಗೋಲಾದ ವ್ಯಕ್ತಿಯೊಬ್ಬ ಗ್ರೇಟರ್ ನೋಯ್ಡಾದ ನಿರ್ಮಾಣ ಹಂತದಲ್ಲಿರುವ ಕಟ್ಟಡದ 14 ನೇ ಮಹಡಿಯಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ. ವ್ಯಕ್ತಿಯನ್ನು ಆಂಟೊನೌ ಮುವಾಯ್ ಎಂದು ಗುರುತಿಸಲಾಗಿದೆ. ಅಲ್ಲಿ ಮುವಾಯಿ ಕೂಗುತ್ತಿರುವುದನ್ನು ನೋಡಿದ ಜನಸಮೂಹ ಆ ಪ್ರದೇಶದಲ್ಲಿ ನೆರೆದಿದೆ. ಜನರು ಅವನನ್ನು ಕೆಳಗಿಳಿಯುವಂತೆ ಒತ್ತಾಯಿಸಿದರು. ಆದರೆ ಅವನು ಯಾರ ಮಾತನ್ನೂ ಕೇಳಲು ನಿರಾಕರಿಸಿದನು.
ಕೂಡಲೇ ಯಾರೋ ಒಬ್ಬರು ಪೊಲೀಸರಿಗೆ ಮಾಹಿತಿ ತಲುಪಿಸಿದರು. ಈ ಕಟ್ಟಡವು ಗ್ರೇಟರ್ ನೋಯ್ಡಾ ಸೆಕ್ಟರ್ ಬೀಟಾ -2 ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಪೊಲೀಸರು ಅವನನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವನು ಕೆಳಗಿಳಿಯಲು ನಿರಾಕರಿಸಿದನು.ಪೊಲೀಸ್ ಅಧಿಕಾರಿಗಳು 14 ನೇ ಮಹಡಿಗೆ ಹೋದರು. ಅವರು ಅವನ ಹತ್ತಿರ ಹೋಗಲು ಪ್ರಯತ್ನಿಸಿದಾಗ, ಅವನು ಒಂದು ಕಂಬಕ್ಕೆ ಅಂಟಿಕೊಂಡು ಜಿಗಿಯುವುದಾಗಿ ಬೆದರಿಕೆ ಹಾಕಿದನು.ಇದು ಹಲವಾರು ಗಂಟೆಗಳ ಕಾಲ ಮುಂದುವರಿಯಿತು ಮತ್ತು ಅಂತಿಮವಾಗಿ ಮುವಾಯಿ ಕೆಳಗಿಳಿಯಲು ಒಪ್ಪಿದನು.
ವಿಚಾರಣೆ ವೇಳೆ, ಮುವಾಯಿ ತನ್ನ ಗೆಳತಿಯೊಂದಿಗೆ ಜಗಳವಾಡಿದ್ದೇನೆ. ಸಾಯಲು ಪ್ರಯತ್ನಿಸುತ್ತಿರುವುದಕ್ಕೆ ಇದು ಕಾರಣ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಇದು ನಿರ್ಮಾಣ ಹಂತದಲ್ಲಿದ್ದ ಕಾರಣ, ಅವರು ಸುಲಭವಾಗಿ 14 ನೇ ಮಹಡಿಗೆ ತಲುಪಬಹುದು. ಒಂದು ಸುತ್ತಿನ ವಿಚಾರಣೆಯ ನಂತರ ಆತನನ್ನು ಪೊಲೀಸರು ಮನೆಗೆ ಕಳಿಸಿದರು. ಭಾಷೆಯ ಅಡೆತಡೆಯಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಲವು ಗಂಟೆಗಳ ಸಮಯ ತೆಗೆದುಕೊಂಡರು ಎಂದು ಕೆಲವು ವರದಿಗಳು ತಿಳಿಸಿವೆ. ಮುವಾಯಿಗೆ ಸಂದೇಶವನ್ನು ಕಳುಹಿಸಲು ಕೆಲವು ಆಫ್ರಿಕನ್ ಸಂಸ್ಥೆಗಳಿಂದ ಪೊಲೀಸರು ಸಹಾಯ ಪಡೆದರು ಎಂದು ಅವರು ಹೇಳಿದ್ದಾರೆ.