ಹೊಸ ರೈಲಿಗೆ ಮೋದಿ ಚಾಲನೆ: 27 ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯ

ಹೊಸ ರೈಲಿಗೆ ಮೋದಿ ಚಾಲನೆ: 27 ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯ

ಬೆಂಗಳೂರು, ನವೆಂಬರ್ 11: ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಬಹುಬೇಡಿಕೆಯ' ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಮತ್ತು ಕಾಶಿ ದರ್ಶನಕ್ಕೆ ಬಿಡಲಾದ ಭಾರತ್‌ ಗೌರವ್‌' ರೈಲಿಗೆ ಪ್ರಧಾನಿಗಳು ಹಸಿರು ನಿಶಾನೆ ತೋರಿಸಲಿದ್ದಾರೆ.

ಈ ಅವಧಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಒಟ್ಟು 27 ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ನಿಲ್ದಾಣಕ್ಕೆ ಬರುವ ರೈಲುಗಳ ಪೈಕಿ ಕೆಲವನ್ನು ಭದ್ರತೆ ದೃಷ್ಟಿಯಿಂದ ರದ್ದು ಮಾಡಲಾಗಿದೆ. ಇನ್ನು ಹಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಆಗಿದ್ದು, ಕೆಲವು ರೈಲುಗಳು ಭಾಗಶಃ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಗುರುವಾರ ರಾತ್ರಿ ಬಿಡುಗಡೆ ಮಾಡಿದೆ.

ಕೆಎಸ್‌ಆರ್‌ ನಿಲ್ದಾಣದಲ್ಲಿ 8 ನೇ ಪ್ಲಾಟ್‌ಫಾರ್ಮ್‌ ನಲ್ಲಿ ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಆಯೋಜನೆಗೊಂಡಿದೆ. ಆಸುಪಾಸಿನ ಪ್ಲಾಟ್‌ಫಾರ್ಮ್‌ಗಳಿಗೆ ರೈಲುಗಳ ಆಗಮನ ಮತ್ತು ನಿರ್ಗಮನವನ್ನು ಕೆಲಕಾಳ ತಡೆ ಹಿಡಿಯಲಾಗಿದೆ

ರದ್ದಾದ, ಮಾರ್ಗ ಬದಲಾದ ರೈಲು ವಿವರ

ಕೆಎಸ್‌ಆರ್ ನಿಂದ ಚನ್ನಪಟ್ಟಣ ಹೋಗುವ (ರೈಲು ಸಂಖ್ಯೆ 06581) ಮತ್ತು ಚನ್ನಪಟ್ಟಣದಿಂದ ಕೆಎಸ್‌ಆರ್ ಬರುವ ರೈಲು ( ಸಂಖ್ಯೆ 06582) ರದ್ದಾಗಿದೆ. ಅರಸೀಕೆರೆಯಿಂದ ಕೆಎಸ್‌ಆರ್ (ರೈಲು ಸಂಖ್ಯೆ 06274), ಕೋಲಾರ- ಕೆಎಸ್‌ಆರ್ (ರೈಲು-16550), ಹಿಂದೂಪುರದಿಂದ ಕೆಎಸ್‌ಆರ್ (ರೈಲು-06266) ರೈಲುಗಳು ಯಶವಂತಪುರದಲ್ಲೇ ನಿಲ್ಲಲಿವೆ.

ಜೊತೆಗೆ ಮೈಸೂರು- ಕೆಎಸ್‌ಆರ್ (ರೈಲು-06256) ರೈಲು ನಾಯಂಡಹಳ್ಳಿಯಲ್ಲೇ ನಿಲುಗಡೆ ಆಗಲಿದೆ. ಮಾರಿಕುಪ್ಪಂ- ಕೆಎಸ್‌ಆರ್ (ರೈಲು ಸಂಖ್ಯೆ- 06264) ರೈಲು ಕಂಟೋನ್ಮೆಂಟ್‌ ನಿಲ್ದಾಣದಲ್ಲೇ ತಲುಪಲಿದ್ದು, ಅಲ್ಲಿಂದ ಕೆಎಸ್‌ಆರ್‌ ಪ್ರವೇಶ ರದ್ದುಗೊಳಿಸಲಾಗಿದೆ.

ಕೆಎಸ್‌ಆರ್ ನಿಲ್ದಾಣದಿಂದ ತುಮಕೂರು (ರೈಲು-06571) ಮತ್ತು ಕೆಎಸ್‌ಆರ್ ನಿಂದ ಹಾಸನ (ರೈಲು 06583) ರೈಲುಗಳು ಮೆಜೆಸ್ಟಿಕ್‌ನ ಕೆಎಸ್‌ಆರ್‌ ಬದಲಿಗೆ ಯಶವಂತಪುರದಿಂದ ಹೊರಡಲಿವೆ. ಕೆಎಸ್‌ಆರ್- ವೈಟ್‌ಫೀಲ್ಡ್‌ (ರೈಲು- 01765) ರೈಲು ಕಂಟೋನ್ಮೆಂಟ್‌ನಿಂದ ಮತ್ತು ಕೆಎಸ್‌ಆರ್‌ನಿಂದ ಮೈಸೂರು (ರೈಲು-06257) ನಾಯಂಡಹಳ್ಳಿಯಿಂದ ನಿಗದಿತ ಊರುಗಳಿಗೆ ತೆರಳಲಿವೆ. ಕುಪ್ಪಂನಿಂದ ಕೆಎಸ್‌ಆರ್ಗೆ ಬರುವ (ರೈಲು-06292) ರೈಲು ಕಂಟೋನ್ಮೆಂಟ್‌ ನಿಲ್ದಾಣಕ್ಕೆ ಕೊನೆಯಾಗಲಿದೆ.

ಅದೇ ರೀತಿ ಮೈಸೂರುನಿಂದ ಬೆಳಗಾವಿಗೆ (ರೈಲು- 17326) ಮೈಸೂರು- ಹಾಸನ-ಅರಸೀಕೆರೆ ಮೂಲಕ ರೈಲು ಸಾಗಲಿದೆ. ಶಿವಮೊಗ್ಗದಿಂದ ಕೆಎಸ್‌ಆರ್ ಬರುವ (ರೈಲು-12090), ಮೈಸೂರು-ಕೆಎಸ್‌ಆರ್ (ರೈಲು-16215), ಚೆನ್ನೈ-ಮೈಸೂರು (ರೈಲು-12007) ರೈಲುಗಳು ಕ್ರಮವಾಗಿ ಸುಮಾರು 60 ನಿಮಿಷ ತಡವಾಗಿ ಮೂಲ ಸ್ಥಳದಿಂದ ಹೊರಡಲಿವೆ. ಕೆಎಸ್‌ಆರ್-ಮೈಸೂರು (ರೈಲು-16558) ರೈಲು 90 ನಿಮಿಷ ತಡವಾಗಿ ನಿರ್ಗಮನ ಆಗಲಿದೆ.

ಕೊಚ್ಚುವೇಲಿಯಿಂದ ಮೈಸೂರು (ರೈಲು-16316) 3ಗಂಟೆ, ಮೈಸೂರು-ಬೆಳಗಾವಿ (ರೈಲು-17326) 1.40 ಗಂಟೆ, ಸೊಲ್ಲಾಪುರ-ಮೈಸೂರು (ರೈಲು-16536) ಮತ್ತು ಬಾಗಲಕೋಟೆ-ಮೈಸೂರು (ರೈಲು-17308) ಕ್ರಮವಾಗಿ 2ಗಂಟೆ ಮೂಲ ಸ್ಥಳದಿಂದ ತಡವಾಗಿ ಹೊರಡಲಿವೆ. ವೈಟ್‌ಫೀಲ್ಡ್‌-ಕೆಎಸ್‌ಆರ್‌(ರೈಲು-01766) ಮಾರ್ಗದುದ್ದಕ್ಕೂ ಅಲ್ಲಿ 50 ನಿಮಿಷ ನಿಲ್ಲಲಿವೆ. ಅದೇ ರೀತಿ, ಮಾರಿಕುಪ್ಪಂ-ಕೆಎಸ್‌ಆರ್ (ರೈಲು-01776) 75 ನಿಮಿಷ, ಮೈಸೂರು- ಕೆಎಸ್‌ಆರ್ (ರೈಲು-16215) ಮತ್ತು ಮೈಸೂರು- ಕೆಎಸ್‌ಆರ್ (ರೈಲು-16023) 1.30ಗಂಟೆ ಹಾಗೂ ಶಿವಮೊಗ್ಗ- ಕೆಎಸ್‌ಆರ್ (ರೈಲು-12090) 1 ಗಂಟೆ ತಡವಾಗಿ ಬಂದು ಸೇರಲಿವೆ ಎಂದು ನೈಋತ್ಯ ರೈಲ್ವೆ ಇಲಾಖೆ ವೇಳಾಪಟ್ಟಿಯ ತಿಳಿ

.