ಹೂವಿನ ಹಾರದಲ್ಲಿ ಮಾಂಸವಿಟ್ಟು 'ಶನಿ ದೇಗುಲ' ಅಪವಿತ್ರಕ್ಕೆ ಯತ್ನ : ಸಿಸಿಟಿವಿಯಲ್ಲಿ ಕೃತ್ಯ ಬಯಲು

ಹೂವಿನ ಹಾರದಲ್ಲಿ ಮಾಂಸವಿಟ್ಟು 'ಶನಿ ದೇಗುಲ' ಅಪವಿತ್ರಕ್ಕೆ ಯತ್ನ : ಸಿಸಿಟಿವಿಯಲ್ಲಿ ಕೃತ್ಯ ಬಯಲು

ದೇವನಹಳ್ಳಿ : ಇಬ್ಬರು ಯುವಕರು ದೇವಾಲಯಕ್ಕೆ ಹೂವಿನ ಹಾರ ನೀಡುವ ನೆಪದಲ್ಲಿ ಜೊತೆಗೆ ಮಾಂಸ ಕೂಡ ಇಟ್ಟು ದೇವಾಲಯದ ಪಾವಿರ್ತ್ಯತೆಯನ್ನು ಹಾಳು ಮಾಡಲು ಸಂಚು ರೂಪಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಶ್ರೀ ಶನಿ ಮಹಾತ್ಮ ದೇವಸ್ಥಾನದಲ್ಲಿ ನಡೆದಿದೆ.

ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ಲಾಸ್ಟಿಕ್ ಕವರ್ ನಲ್ಲಿ ಹೂವಿನ ಹಾರಗಳನ್ನು ತಂದು ಕೊಟ್ಟಿದ್ದಾರೆ. ದೇವಾಲಯದ ಸಿಬ್ಬಂದಿಗಳಿಗೆ ಬ್ಯಾಗ್ ನೀಡಿ ಇದರಲ್ಲಿ ಹೂವಿನ ಹಾರವಿದೆ ತೆಗೆದುಕೊಳ್ಳಿ ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ದೇವಾಲಯದ ಸಿಬ್ಬಂದಿ ಬ್ಯಾಗ್ ನಿಂದ ಹಾರ ಹೊರ ತೆಗೆದಾಗ ಬ್ಯಾಗ್ ನಲ್ಲಿ ಹಾರದ ಜೊತೆಗೆ ಮಾಂಸವೂ ಇರುವುದು ಬಯಲಾಗಿದೆ. ಕೂಡಲೇ ಸಿಬ್ಬಂದಿ ಮಾಂಸ ಹಾಗೂ ಹೂವಿನ ಹಾರ ಎಸೆದು ದೇವಾಲಯದ ಸ್ವಚ್ಚ ಮಾಡಿದರು. ಸದ್ಯ, ಹೂವು ಗರ್ಭಗುಡಿ ಸೇರುವ ಮುನ್ನವೇ ಈ ವಿಚಾರ ಬಯಲಿಗೆ ಬೆಳಕಿಗೆ ಬಂದಿದೆ. ಸಿಸಿಟಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು,ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.