ಬೆಂಗಳೂರಲ್ಲಿ ಫೆ. 24ರಿಂದಲೇ ಬೇಸಿಗೆ ಆರಂಭ : ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು : ಚಳಿಗಾಲ ಮುಗಿಯುತ್ತಿದ್ದಂತೆ ಫೆ. 24ರಿಂದಲೇ ಬೇಸಿಗೆ ಆರಂಭಗೊಂಡಿದ್ದು, ಬಿಸಿಗಾಳಿಯ ವಾತಾವರಣ ನಿರ್ಮಾಣವಾಗಿದೆ, ಮತ್ತಷ್ಟುಶಾಖ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ವರ್ಷ ಫೆಬ್ರವರಿ ತಿಂಗಳ 24 ರಿಂದಲೇ ಬೇಸಿಗೆ ಆರಂಭವಾಗಲಿದೆ. ಚುಮು ಚುಮು ಚಳಿ ಮುಗಿದ ಬೆನ್ನಲ್ಲೆ ರಾತ್ರಿ ಮಲಗುವಾಗಲು ಫ್ಯಾನ್ ಹಾಕಿಕೊಂಡು ಮಲಗಬೇಕಾದಂತೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಶಿವರಾತ್ರಿ ಕಳೆದು ಇನ್ನೇನು ವಾರವೂ ಆಗಿಲ್ಲ, ಆಗಲೇ ಬಿಸಿ ಗಾಳಿಯ ಝಳ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಫೆಬ್ರವರಿ ತಿಂಗಳಿನಲ್ಲಿ 30-31 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ. ಈ ಎಚ್ಚರಿಕೆಯ ಹಿಂದೆ ಸ್ಪಷ್ಟ ಅಂಕಿ-ಅಂಶಗಳನ್ನೂ ಭಾರತೀಯ ಹವಾಮಾನ ಇಲಾಖೆ ಒದಗಿಸಿದೆ.
ಬೆಂಗಳೂರಲ್ಲಿ ಫೆಬ್ರವರಿ ತಿಂಗಳ ಕೊನೆಯ ದಿನಗಳಲ್ಲಿ ಬಿಸಿಲಿನ ಶಾಖ ಇನ್ನಷ್ಟು ಏರಲಿದೆ. ಬೆಂಗಳೂರಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ 7 ಮಿಲಿ ಮೀಟರ್ನಷ್ಟು ಮಳೆ ಸುರಿಯುತ್ತಿತ್ತು. ಈ ವರ್ಷ ಮಾತ್ರ ಮಳೆ ಕಡಿಮೆಯಾಗಿದೆ. ಇದರು ಬಿಸಿಲಿನ ಝಳ ಹೆಚ್ಚಾಗಲು ಕಾರಣವಾಗಿದೆ. ಬಿರು ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಆರೋಗ್ಯ ದೃಷ್ಟಿಯಿಂದ ಹಣ್ಣಿನ ರಸ, ಮಜ್ಜಿಗೆ ದ್ರವಾಹಾರಗಳನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿಸಬಹುದು.