ಹುಷಾರ್.! ಇನ್ಮುಂದೆ 'ವಕೀಲ'ರ ಮೇಲೆ ಹಲ್ಲೆ ಮಾಡಿದ್ರೇ '3 ವರ್ಷ ಜೈಲು' ಫಿಕ್ಸ್: 'ವಿಧೇಯಕ' ಸದನದಲ್ಲಿ ಮಂಡನೆ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023 ಮಂಡಿಸಲಾಗಿದೆ. ಈ ಕಾಯ್ದೆ ಉಭಯ ಸದನಗಳಲ್ಲಿ ಪಾಸ್ ಆದ್ರೇ, ಯಾವುದೇ ವ್ಯಕ್ತಿ ನ್ಯಾಯವಾದಿಯ ಮೇಲೆ ಹಿಂಸೆ ಎಸಗಿದಲ್ಲಿ, ಆತನಿಗೆ ಆರು ತಿಂಗಳಿನಿಂದ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ ವರೆಗೆ ದಂಡ ಅಥವಾ ಇವರೆಡನ್ನು ವಿಧಿಸುವ ಕಾನೂನು ಜಾರಿಗೊಳ್ಳಲಿದೆ.
ಹೌದು ರಾಜ್ಯ ಸರ್ಕಾರದಿಂದ ವಿಧಾನಸಭೆಯಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023ಅನ್ನು ಮಂಡಿಸಲಾಗಿದೆ. ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಪ್ರಾಧಿಕಾರದ ಮುಂದೆ ಬಾಕಿ ಇರುವ ವ್ಯಾಜ್ಯ ಅಥವಾ ಮೊಕದ್ದಮೆಯ ಸಂಬಂಧದಲ್ಲಿ ನ್ಯಾಯ ವಾದಿಯು ತನ್ನ ಕರ್ತವನ್ನಯವವನ್ನು ನಿರ್ವಹಿಸದಂತೆ ಅಡ್ಡಿಪಡಿಸಲು ಆತನ ಜೀವಕ್ಕೆ ಅಪಾಯವಾಗುವ ಅಥವಾ ದೈಹಿಕ ಹಾನಿ, ಅಪರಾಧಿಕ ಭಯೋತ್ಪಾನೆಯಂತ ಯಾವುದೇ ಚಟುವಟಿಕೆಗಳನ್ನು ಹಿಂಸಾಚಾರ ಎಂದು ಪರಿಗಣಿಸಿ, ಕ್ರಮ ಕೈಗೊಳ್ಳಲು ಈ ಕಾಯ್ದೆ ಅವಕಾಶ ನೀಡಲಿದೆ.
ಇದಲ್ಲದೇ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನೀಡಿದ ಸಿಂಧುವಾದ ವೃತ್ತಿ ನಿರತ ಪ್ರಮಾಣ ಪತ್ರವನ್ನು ಹೊಂದಿರುವ ಮತ್ತು ಯಾವುದೇ ಬಾರ್ ಅಸೋಸಿಯೇಷನ್ ಸದಸ್ಯನಾಗಿರುವ ನ್ಯಾಯವಾದಿ, ಹಿರಿಯ ನ್ಯಾಯವಾದಿ, ಕಾನೂನು ವೃತ್ತಿ ಮಾಡುವವರನ್ನು ನ್ಯಾಯವಾದಿ ಎಂದು ಪರಿಗಣಿಸಲು ಅವಕಾಶ ಕಲ್ಪಿಸಿದೆ.
ಸಂಜ್ಞೆಯ ಅಪರಾಧದ ಸಂದರ್ಭದಲ್ಲಿ ನ್ಯಾಯವಾಧಿಯನ್ನು ಪೊಲೀಸರು ಬಂಧಿಸಿದಾಗ, ಅಂತಹ ಬಂಧನದ 24 ಗಂಟೆಯ ಒಳಗಾಗಿ ನ್ಯಾಯವಾದಿ ಸದಸ್ಯನಾಗಿರುವ ನ್ಯಾಯವಾದಿಗಳ ಅಸೋಸಿಯೇಷನ್ ಅಧ್ಯಕ್ಷ, ಕಾರ್ಯದರ್ಶಿಗೆ ಬಂಧನದ ವಿಷಯವನ್ನು ತಿಳಿಸಬೇಕಿದೆ.