ಬಾಂಗ್ಲಾ ವಿಮೋಚನಾ ಯುದ್ಧದ ವಿಜಯೋತ್ಸವದ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡ ಹುಧಾ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ

 ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆ ಗೊಳಿಸಿದ ಯುದ್ಧದ ವಿಜಯೋತ್ಸವದ 50ನೇ ವರ್ಷಚಾರಣೆಯ ಅಂಗವಾಗಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಭಾಗವಹಿಸಿ,  ಯುದ್ಧದಲ್ಲಿ ಮಡಿದ ವೀರ ಸೇನಾನಿಗಳಿಗೆ ಗೌರವ ನಮನಗಳನ್ನು ಸಲ್ಲಿಸಿದರು. .

ಇದೇ ಸಂದರ್ಭದಲ್ಲಿ ವೀರ ಸೇನಾನಿ  ವಸಂತ ಲಾಡ್ ರವರ ಪತ್ನಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ  ಅಮಿನಗಡ ರವರು, ಕೊಪ್ಪದ್ ರವರು, ವಸಂತ ಅರ್ಕಾಚಾರಿ, ಚಿಕ್ಕಮಠರವರು ಹಾಗೂ ವೀರ ಸೇನಾನಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.