ಜ.19ರಂದು ಪ್ರಧಾನಿ ಮೋದಿ ಯಾದಗಿರಿಗೆ ಆಗಮನ ಹಿನ್ನೆಲೆ : ಹುಣಸಗಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಯಾದಗಿರಿ: ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಯಾದಗಿರಿ ಜಿಲ್ಲೆಗೆ ಆಗಮಿಸಲಿದ್ದಾರೆ. ಹುಣಸಗಿ ತಾಲೂಕಿನ ಕೊಡೆಕಲ್ನಲ್ಲಿ ನಡೆಯುವ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ.
ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಣಸಗಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ತಹಶೀಲ್ದಾರ್ ಜಗದೀಶ್ ಚೌರ್ ಹೇಳಿದ್ದಾರೆ.ಇನ್ನು ಅಂದು ಪ್ರಧಾನಿ ಮೋದಿಯವರು 1,050 ಕೋಟಿ ರೂ.
ಹುಣಸಗಿ ತಾಲ್ಲೂಕು, ಸುರಪುರ ತಾಲ್ಲೂಕು, ಶಹಾಪುರ, ವಡಗೇರಾ ತಾಲ್ಲೂಕು, ಯಾದಗಿರಿ ತಾಲ್ಲೂಕು ಹಾಗೂ ಗುರುಮಠಕಲ್ ತಾಲ್ಲೂಕಿನ ಒಟ್ಟು ಜಿಲ್ಲೆಯ 710 ಗ್ರಾಮೀಣ ಜನವಸತಿಗಳಿಗೆ ಹಾಗೂ 3 ಸ್ಥಳೀಯ ಸಂಸ್ಥೆಗಳಿಗೆ ಮತ್ತು ಹುಣಸಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಹೇಳಿದ್ದಾರೆ.