ಹಾಸನ, ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಟಿಕೆಟ್ ಭರ್ಜರಿ ಪೈಪೋಟಿ

ಹಾಸನ, ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಟಿಕೆಟ್ ಭರ್ಜರಿ ಪೈಪೋಟಿ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕಾಂಗ್ರೆಸ್‌ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಡೆಯಾಗಿದೆ. ಇದೀಗ ಉಳಿದ ಕ್ಷೇತ್ರದ ಟಿಕೆಟ್‌ ಹಂಚಿಕೆ ಕುರಿತು ಗೊಂದಲ ನಿರ್ಮಾಣವಾಗಿದೆ.

ಯಾಕಂದರೆ ಹಾಸನ , ಬೆಳಗಾವಿ, ಕಲಬುರಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರು ನಡುವೆಯೇ ಔಅರಿ ಪೈಪೋಟಿ ಶುರುವಾಗಿದೆ. ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹೊಳೆನರಸೀಪುರಕ್ಕೆ ಶ್ರೇಯಸ್ ಪಟೇಲ್, ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಮುರಳಿ ಮೋಹನ್ ಹೆಸರು ಘೋಷಣೆ ಆಗಿದೆ. ಆದರೆ ಅರಕಲಗೂಡು ಕ್ಷೇತ್ರದಲ್ಲಿ ಟಿಕೇಟ್​ಗಾಗಿ ಭಾರೀ ಪೈಪೋಟಿ ನಿರ್ಮಾಣವಾಗಿದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕೃಷ್ಣೇಗೌಡ ಟಿಕೇಟ್ ನಿರೀಕ್ಷೆಯಲ್ಲಿದ್ದರೆ, ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಕೂಡ ಟಿಕೇಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಸಚಿವ ದಿವಂಗತ ಎಚ್.ಸಿ.ಶ್ರೀಕಂಠಯ್ಯ ಮೊಮ್ಮಗ ದೀಪು, ಜತ್ತೇನಹಳ್ಳಿ ರಾಮಚಂದ್ರ ನಡುವೆ ಪೈಪೋಟಿ ಇದೆ. ಬೇಲೂರು ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಟಿಕೇಟ್​ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.

ಇನ್ನು ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಮಾತ್ರ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿದೆ. ಉಳಿದ 9 ಕ್ಷೇತ್ರಗಳಿಗಾಗಿ ಟಿಕೆಟ್ ಫೈಟ್ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣದ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಇದೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಗಜಾನನ ಮಂಗಸೂಳಿ, ಧರೇಪ್ಪ ಠಕ್ಕನ್ನವರ, ರಾಯಬಾಗ ಮತಕ್ಷೇತ್ರದಲ್ಲಿ ಮಹಾವೀರ ಮೋಹಿತೆ ಮತ್ತು ಶಂಭು ಕಲ್ಲೋಳಕರ್, ನಿಪ್ಪಾಣಿ ಮತಕ್ಷೇತ್ರದಲ್ಲಿ ಕಾಕಾಸಾಬ್ ಪಾಟೀಲ್, ಉತ್ತಮ ಪಾಟೀಲ್ ನಡುವೆ ಟಿಕೆಟ್ ಫೈಟ್‌ ಶುರುವಾಗಿದೆ.