ಹಾಸನದಲ್ಲಿ ರಾಜಕೀಯ ವಿಷಯಕ್ಕೆ ಸ್ನೇಹಿತನ ಕೈ ಕಟ್ ಮಾಡಿದ ಪಾಪಿ
ಹಾಸನ: ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ದ್ವೇಷ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಹಾಸನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕ್ಷುಲ್ಲಕ ವಿಷಯಕ್ಕಾಗಿ ಪ್ರಾಣ ಸ್ನೇಹಿತನ ಕೈ ಕಟ್ ಮಾಡಿರುವ ಘಟನೆ ನಡೆದಿದೆ.ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸ್ಕವಳ್ಳಿ ಗ್ರಾಮದಲ್ಲಿ ರಾಜಕೀಯ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳಕ್ಕೆ ಸ್ನೇಹಿತನ ಕೈ ಕಡಿದಿದ್ದಾನೆ.ಗುರುಮೂರ್ತಿ ಹಲ್ಲೆಗೊಳಾಗದ ವ್ಯಕ್ತಿ.
ಗುರುಮೂರ್ತಿ ಬಿಜೆಪಿ ಪಕ್ಷದ ಕಾರ್ಯಕರ್ತ, ರಮೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತ ಆಗಿದ್ದ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ ಹೇಳಿದ್ದಾನೆ. ಇತ್ತ ರಮೇಶ್ ಇಲ್ಲ ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ್ದಾನೆ.ಇದರಿಂದ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ತಳ್ಳಾಡಿದ್ದಾರೆ.