ಹೊಸ ಅವತಾರದಲ್ಲಿ ಮತ್ತೆ ರೋಡಿಗಿಳಿಯಲಿದೆ ಅಂಬಾಸಿಡರ್‌: 'ರಸ್ತೆ ರಾಜ'ನ ಹೊಸ ಲುಕ್ ಹೇಗಿರಲಿದೆ?

Hindustan Motors- Ambassador ಹೊಸ ಕಾರಿನ ಬಗ್ಗೆ ನಾವು ಸಂಶೋಧನೆ ಹಾಗೂ ಅಭಿವೃದ್ಧಿ (Research and Development) ಈಗಷ್ಟೇ ನಾವು ಪ್ರಾರಂಭಿಸಿದ್ದೇವೆ. ಹೊಸ ಅಂಬಾಸಿಡರ್‌ ಮೋಡಲ್‌ ಹ್ಯಾಚ್‌ಬ್ಯಾಕ್‌ (hatchback) ಮಾದರಿಯಾಗಿರಲಿದ್ದು, ಹೊಸ ತಲೆಮಾರು ಇಷ್ಟ ಪಡುವಂಥ ಎಲ್ಲಾ ಫೀಚರ್‌ಗಳು ಇರಲಿವೆ. ಮೆಕ್ಯಾನಿಕಲ್‌ ಡಿಸೈನ್‌ ಹಾಗೂ ಹೊಸ ಎಂಜಿನ್‌ ತಯಾರಿಕೆ ಕೊನೆಯ ಹಂತ ತಲುಪಿದೆ ಎಂದು ಹಿಂದೂಸ್ಥಾನ್‌ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ್‌ ಬೋಸ್‌ ಹೇಳಿದ್ದಾರೆ.

ಹೊಸ ಅವತಾರದಲ್ಲಿ ಮತ್ತೆ ರೋಡಿಗಿಳಿಯಲಿದೆ ಅಂಬಾಸಿಡರ್‌: 'ರಸ್ತೆ ರಾಜ'ನ ಹೊಸ ಲುಕ್ ಹೇಗಿರಲಿದೆ?
ಬೆಂಗಳೂರು: ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ರಾಜನಾಗಿ ಮೆರೆದಿದ್ದ ಹಿಂದೂಸ್ಥಾನ್‌ ಮೋಟಾರ್ಸ್‌ನ ( ) ಅಂಬಾಸಿಡರ್‌ () ಕಾರು ಮತ್ತೆ ರಸ್ತೆಗಿಳಿಯಲು ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಅಂಬಾಸಿಡರ್‌ ಕಾರುಗಳು ಮತ್ತೆ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿವೆ. ಆದರೆ ಈ ಬಾರಿ ಎಲೆಕ್ಟ್ರಿಕ್‌ ಕಾರಿನ ರೂಪದಲ್ಲಿ ರಂಗ ಪ್ರವೇಶ ಮಾಡಲಿದೆ. ಸದ್ಯ ಸಿಕ್ಕಿರುವ ಮೂಲಗ ಪ್ರಕಾರ ಹೊಸ ಅಂಬಾಸಿಡರ್‌ ಮೊಡೆಲ್ ಅನ್ನು ತಯಾರಿಸಲು ಫ್ರೆಂಚ್‌ ಮೂಲದ ಕಾರು ಉತ್ಪಾದಕ ಕಂಪನಿ ಪಿಯುಗಿಯೋ (Peugeot) ಜತೆ ಮಾತುಕತೆ ನಡೆಸಿದ್ದು, ಡಿಸೈನ್‌ ಹಾಗೂ ಎಂಜಿನ್‌ ಬಗ್ಗೆ ಸಮಾಲೋಚನೆ ನಡೆಸಿದೆ ಎಂದು ಗೊತ್ತಾಗಿದೆ. 'ಹೊಸ ಕಾರಿನ ಬಗ್ಗೆ ನಾವು ಸಂಶೋಧನೆ ಹಾಗೂ ಅಭಿವೃದ್ಧಿ (Research and Development) ಈಗಷ್ಟೇ ನಾವು ಪ್ರಾರಂಭಿಸಿದ್ದೇವೆ. ಹೊಸ ಅಂಬಾಸಿಡರ್‌ ಮೋಡಲ್‌ ಹ್ಯಾಚ್‌ಬ್ಯಾಕ್‌ (hatchback) ಮಾದರಿಯಾಗಿರಲಿದ್ದು, ಹೊಸ ತಲೆಮಾರು ಇಷ್ಟ ಪಡುವಂಥ ಎಲ್ಲಾ ಫೀಚರ್‌ಗಳು ಇರಲಿವೆ' ಎಂದು ಹಿಂದೂಸ್ಥಾನ್‌ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ್‌ ಬೋಸ್‌ ಹೇಳಿದ್ದಾರೆ. ಈ ಕುರಿತಂತೆ ವಿಜಯ ಕರ್ನಾಟಕದ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡಿರುವ ಅವರು, ಹೊಸ ಲುಕ್‌ನ ಅಂಬಾಸಿಡರ್‌ ಕಾರನ್ನು ಹೊರತರುವ ಪ್ರಕ್ರಿಯೆ ಜಾರಿಯಲ್ಲಿದೆ. ಮೆಕ್ಯಾನಿಕಲ್‌ ಡಿಸೈನ್‌ ಹಾಗೂ ಹೊಸ ಎಂಜಿನ್‌ ತಯಾರಿಕೆ ಕೊನೆಯ ಹಂತ ತಲುಪಿದೆ ಎಂದು ಅವರು ಹೇಳಿದ್ದಾರೆ. ಹೊಸ ಕಾರು ತಯಾರಿಕೆಗೆ ಯೂರೋಪಿಯನ್‌ ಕಂಪನಿಯೊಂದಿಗೆ ಒಟ್ಟು 600 ಕೋಟಿ ರೂ. ಹೂಡಿಕೆ ಮಾಡಿದ್ದಾಗಿ ತಿಳಿಸಿರುವ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಭಾರತೀಯ ರಸ್ತೆಗಳಲ್ಲಿ ದಶಕಗಳ ಕಾಲ ರಾಜನಂತೆ ಮೆರೆದಿದ್ದ ಕಾರು 2014 ರಲ್ಲಿ ಉತ್ಪಾದನೆ ನಿಲ್ಲಿಸಿತ್ತು. ಈಗ ಎಲ್ಲವೂ ಅಂದುಕೊಂಡಂತೆ ನಡೆದರೇ ಹಳೇಯ ಉತ್ಪಾದನಾ ಘಟಕದಿಂದಲೇ ಹೊಸ ಕಾರುಗಳು ತಯಾರಿ ಆರಂಭವಾಗಲಿದೆ ಎನ್ನುವುದು ಹಿಂದೂಸ್ಥಾನ್‌ ಮೋಟಾರ್ಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ. ಈ ಹಿಂದೆ 2104 ರ ವರೆಗೂ ಪಶ್ಚಿಮ ಬಂಗಾಳದ ಉತ್ತರ್‌ಪಾರ ಘಟಕದಲ್ಲಿ ಅಂಬಾಸಿಡರ್‌ ಕಾರುಗಳು ತಯಾರಾಗುತ್ತಿದ್ದವು. ಇಲ್ಲಿಂದಲೇ ಹೊಸ ಅಧ್ಯಾಯ ಪ್ರಾರಂಭ ಮಾಡಲು ಅಂಬಾಸಿಡರ್‌ ಉದ್ದೇಶಿಸಿದೆ. ಉತ್ತಾರ್‌ಪರ ಉತ್ಪಾದನಾ ಘಟಕದ ತಂತ್ರಜ್ಞಾನ ಅಭಿವೃದ್ಧಿಗೆ ಹಿಂದೂಸ್ಥಾನ್‌ ಮೋಟಾರ್ಸ್‌ ಹೆಚ್ಚಿನ ಹಣ ವ್ಯಯಿಸುತ್ತಿದೆ. ಸದ್ಯ ಅಲ್ಲಿ ವರ್ಷಕ್ಕೆ 25,000 ಕಾರುಗಳು ಉತ್ಪಾದನೆ ಮಾಡುವಷ್ಟು ಸೌಲಭ್ಯಗಳಿವೆ. ಈಗಾಗಲೇ 10,000ಕ್ಕಿಂತ ಅಧಿಕ ಕಾರುಗಳನ್ನು ತಯಾರಿ ಮಾಡುವ ಸೌಲಭ್ಯ ಹಾಗೂ ಸ್ಥಳವನ್ನು ಕಂಪನಿ ಬಳಸಿಕೊಳ್ಳುತ್ತಿದೆ. ಹೊಸ ಮಾದರಿಯ ಅಂಬಾಸಿಡರ್‌ ಕಾರು ಲಾಂಚ್‌ ಆದ ಬಳಿಕ ಇನ್ನಷ್ಟು ಹೆಚ್ಚಿನ ಸ್ಥಳ ಹಾಗೂ ಸೌಲಭ್ಯಗಳನ್ನು ಬಳಸಿಕೊಳ್ಳಲಿದ್ದೇವೆ ಎಂದು ಹಿಂದೂಸ್ಥಾನ್‌ ಮೋಟಾರ್ಸ್‌ ಹೇಳಿದೆ.