ಚುನಾವಣೆ ಮೂಡ್ನಲ್ಲಿ ಶಾಸಕರು.. ಕಲಾಪಕ್ಕೆ ಗೈರು.. ಸಿಟಿ ರವಿ-ಶಿವಲಿಂಗೇಗೌಡರ ಮಧ್ಯೆ 'ಅಭಿಮನ್ಯು ಕಾಳಗ'

ಈ ಬಾರಿಯ ಬಜೆಟ್ ಅಧಿವೇಶನ ಈಗಾಗಲೇ ಆರಂಭವಾಗಿದ್ದು, ನಿನ್ನೆ ದಿನದ ಕಲಾಪ ನಡೆದಿದೆ. ಆದ್ರೆ ಅದೇಕೋ ಏನೋ, ಸದಸ್ಯರಿಗೆ ಕಲಾಪದಲ್ಲಿ ಭಾಗವಹಿಸುವ ಆಸಕ್ತಿಯೇ ಕಾಣದಾಗಿದೆ. ಕೇವಲ ಬೆರಳೆಣಿಕೆಯಷ್ಟು ಸದಸ್ಯರು ಭಾಗಿಯಾಗ್ತಿದ್ದಾರೆ. ಇದರ ನಡುವೆಯೇ ಕಲಾಪದಲ್ಲಿ ನಿನ್ನೆ ಕೆಲವು ಇಂಟರೆಸ್ಟಿಂಗ್ ಚರ್ಚೆಗಳು ನಡೆದವು.
ಸದನದಲ್ಲಿ ಶಿವಲಿಂಗೇಗೌಡರ ಮೂಲ ಪಕ್ಷದ್ದೇ ಚರ್ಚೆ..!
ಕಳೆದ ಶುಕ್ರವಾರ ಪ್ರಾರಂಭವಾಗಿದ್ದ ವಿಧಾನಮಂಡಲ ಜಂಟಿ ಅಧಿವೇಶನ, ಇವತ್ತು ಮುಂದುವರೆದಿತ್ತು. ಪ್ರಚಾರ ಬಿಸಿ ನಡುವೆಯೂ ನಡೆ ಸದನದಲ್ಲಿ ಇವತ್ತು ಸ್ವಾರಸ್ಯಕ್ಕರ ಮತ್ತು ಕಾಲೆಳೆಯುವ ಪ್ರಸಂಗ ನಡೀತು. ಅಧಿವೇಶದನ ಹೊರಗೆ ಚರ್ಚೆಗೆ ಗ್ರಾಸವಾಗಿದ್ದ ಅರಸೀಕೆರೆ ಶಾಕಸಕರು, ಇವತ್ತು ಸದನದಲ್ಲೂ ಸಿಕ್ಕಾಪಟ್ಟೆ ಸುದ್ದಿಯಾದರು.