ಪೇಶ್ವೆ DNA ಹಿನ್ನೆಲೆ ಇರೋರು ನನ್ನ ರಾಜ್ಯದ CM ಆಗಬಾರದು -ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಈಗಾಗಲೇ ವಿವಾದವೇರ್ಪಟ್ಟು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು ಆಗಿದೆ. ಆದ್ರೂ ಆಕ್ರೋಶ ತಣ್ಣಗಾಗಿಲ್ಲ. ಅತ್ತ ಹುಬ್ಬಳ್ಳಿಯಲ್ಲಿ ನಿನ್ನೆ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣರ ಆಕ್ರೋಶ ಭುಗಿಲೆದ್ದಿತ್ತು.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣ ಸಮುದಾಯದ ನಾಯಕ ಸಿಎಂ ಆಗ್ತಾರೆ ಅಂತ ಕುಮಾರಸ್ವಾಮಿ ಸಿಡಿಸಿದ್ದ ಬಾಂಬ್ ಕೇಸರಿಪಡೆ ತಲ್ಲಣಗೊಂಡಿತ್ತು. ದಳಪತಿ ವಿರುದ್ಧ ಇಡೀ ಕಮಲಪಾಳಯವೇ ಮುಗಿಬಿದ್ದಿತ್ತು. ಅಂದಿನಿಂದಲೂ ನನ್ನ ಹೇಳಿಕೆಗೆ ಬದ್ಧ ಎನ್ನುತ್ತಿರುವ ಕುಮಾರಸ್ವಾಮಿ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.