ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?

ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?

ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್‌ ವಿಚಾರದ ಬಳಿಕ ಟಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮನ್ನಾ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ದೇವಸ್ಥಾನಗಳನ್ನು ರೌಂಡ್ಸ್‌ ಹಾಕುವುದು, ಪೂಜೆ ಮಾಡುವುದನ್ನು ಕಾಣಬಹುದು.

ಮಿಲ್ಕಿ ಬ್ಯೂಟಿ ತಮನ್ನಾಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿರುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.

ತೆಲುಗು ಅಲ್ಲದೆ ತಮಿಳಿನಲ್ಲೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ಪಡೆದ ಈ ಬೆಡಗಿ, ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಎಫ್3 ಚಿತ್ರದ ಮೂಲಕ ಮತ್ತೊಂದು ಯಶಸ್ಸನ್ನು ಗಳಿಸಿದ ಮಿಲ್ಕಿ ಬ್ಯೂಟಿ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕೆಲ ದಿನಗಳ ಹಿಂದೆ ಶುರುವಾದ ಈ ಸಿನಿಮಾದ ಶೂಟಿಂಗ್ ಸದ್ಯ ಶರವೇಗದಲ್ಲಿ ಸಾಗುತ್ತಿದೆ. ಬಾಲಿವುಡ್‌ನಲ್ಲೂ ತಮನ್ನಾ ಬ್ಯುಸಿಯಾಗಿದ್ದಾರೆ. ಆದರೆ ಕೆಲವು ತಿಂಗಳುಗಳಿಂದ ಮಿಲ್ಕಿ ಬ್ಯೂಟಿಯ ರೊಮ್ಯಾನ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಆಕೆ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೊಸ ವರ್ಷಾಚರಣೆಯ ಅಂಗವಾಗಿ, ಗೋವಾದಲ್ಲಿ ಇಬ್ಬರು ಭೇಟಿಯಾದ ಚಿತ್ರ ವೈರಲ್ ಆಗಿದ್ದು,

ಅವರ ಪ್ರೀತಿ ಗಟ್ಟಿಯಾಗಿದೆ. ಆದರೆ, ಈ ಸುದ್ದಿಗೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೆಲ್ಲದರ ನಡುವೆ ತಮನ್ನಾ ಕಾವಿ ತೊಟ್ಟು ಕಾಣಿಸಿಕೊಂಡಿದ್ದಾರೆ.