ಶಿಂಷಾ ನದಿ ದಡದಲ್ಲಿ ವಿಷ್ಣುವಿನ ವಿಗ್ರಹ ಪತ್ತೆ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಸಮೀಪದ ಶಿಂಷಾ ನದಿಯ ದಡದಲ್ಲಿ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ನಾಲ್ಕು ಅಡಿ ಎತ್ತರದ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದೆ.
ಗುಡ್ಡೇನಹಳ್ಳಿ ಗ್ರಾಮದ ಯೋಗೀಶ್ ಎಂಬುವರ ತೋಟಕ್ಕೆ ಹೊಂದಿಕೊಂಡಂತಿರುವ ತೊರೆಯ ಬಳಿಯ ನೀರಿನಲ್ಲಿ ಈ ವಿಷ್ಣುವಿನ ವಿಗ್ರಹ ಕಂಡುಬಂದಿದೆ.
ಶೆಟ್ಟಿಗೊಂಡನಹಳ್ಳಿಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಹಳ್ಳಿಕಾರ ಮಠಕ್ಕೆ ಈ ವಿಗ್ರಹ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.