ಶಾಸಕ ವಿಶ್ವನಾಥ್ ಹತ್ಯೆಗೆ ಸಂಚು ಆರೋಪ : ಕುಳ್ಳ ದೇವರಾಜ್ ಗೆ ಸಿಸಿಬಿ ಡ್ರಿಲ್
ಬೆಂಗಳೂರು : ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆಯ ಬಗ್ಗೆ ಮಾತನಾಡಿದ್ದರೆಂಬ ಕಾರಣಕ್ಕೆ ರೌಡಿಶೀಟರ್ ಸೇರಿ ಕಾಂಗ್ರೆಸ್ ಮುಖಂಡನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಳ್ಳ ದೇವರಾಜ್ ಎಂಬ ರೌಡಿ ಸ್ಟಿಂಗ್ ವಿಡಿಯೋ ಮಾಡುವ ಮೂಲಕ ವಿಶ್ವನಾಥ್ ಗೆ ಆಪ್ತನಾಗಲು ಮಾಸ್ಟರ್ ಫ್ಲ್ಯಾನ್ ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನು ಪೊಲೀಸರು ವಿಚಾರಣೆಗಾಗಿ ಕಾಂಗ್ರೇಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ರನ್ನು ಕರೆಸಿದ್ದು ನಿನ್ನೆ ರಾತ್ರಿಯೇ ಗೋಪಾಲಕೃಷ್ಣರನ್ನು ವಾಪಸ್ ಕಳುಹಿಸಿ ಕುಳ್ಳ ದೇವರಾಜ್ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಸ್ಟಿಂಗ್ ಮಾಡುವ ಉದ್ದೇಶದಿಂದ ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ ಬಳಿ ಎತ್ತಿ ಕಟ್ಟಿದ್ದ ಕುಳ್ಳ ದೇವರಾಜ ತಾನು ವಿಶ್ವನಾಥ್ ಬೆಂಬಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದ.
ಇನ್ನು ವಿಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಹತ್ಯೆಗೆ ಪ್ರಚೋದನೆ ನೀಡಿರುವ ಕಾರಣದಿಂದಾಗಿ ಕುಳ್ಳ ದೇವರಾಜ ಮುಂದುವರೆಸಿದ್ದಾರೆ.