ಶಹಬ್ಬಾಸ್..! ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಅನಾಹುತ ತಪ್ಪಿಸಲು ʼಕೆಂಪು ವಸ್ತ್ರ ಹಿಡಿದ ವೃದ್ದೆ

ಶಹಬ್ಬಾಸ್..! ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಅನಾಹುತ ತಪ್ಪಿಸಲು ʼಕೆಂಪು ವಸ್ತ್ರ ಹಿಡಿದ ವೃದ್ದೆ

ಮಂಗಳೂರು: ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರವೊಂದು ಬಿದ್ದಿದ್ದನ್ನ ಕಂಡು ಅನಾಹುತ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆಯ ಸಾಹಸ ಮೆರೆದಿದ್ದು, ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸುಮಾರು 2.10ರ ಸುಮಾರಿಗೆ ಆಯರಮನೆ ಸಮೀಪ ರೈಲು ಹಳಿಗೆ ಮರವೊಂದು ಬಿದ್ದಿದ್ದನು ಕಂಡು ಚಾಣಾಕ್ಷತನದಿಂದ 70 ವರ್ಷ ವೃದ್ದೆ ಚಂದ್ರವತಿ ಎಂಬಾಕೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಬರುವ ಸಮಯಕ್ಕೆ ಸರಿಯಾಗಿ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸಲು ಮುಂದಾಗಿದ್ದಲ್ಲದೇ, ಭಾರೀ ಅನಾಹುತವೊಂದು ತಪ್ಪಿಸಿದ್ದಾರೆ.

ಈಕೆಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಈ ವಿಚಾರ ತಿಳಿದು ಬಳಿಕ ಸುಮಾರು ಅರ್ಧ ತಾಸಿ‌ನ ಬಳಿಕ ಮರ ತೆರವು ಮಾಡಲಾಗಿದೆ ಎಂದು ವರದಿಯಾಗಿದೆ.

ಚಿಕ್ಕಮಗಳೂರಲ್ಲಿ ಮತದಾರರಿಗೆ ಶಾಸಕ ಹಂಚಿದ ಕುಕ್ಕರ್‌ ಸ್ಪೋಟ, ತಪ್ಪಿದ ಅನಾಹುತ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ಮತದಾರರ ಸೆಳೆಯೋದಕ್ಕೆ ಶಾಸಕ ಟಿ.ಡಿ ರಾಜೇಗೌಡ ನೀಡಿದ ಕುಕ್ಕರ್‌ ಸ್ಪೋಟಗೊಂಡ ಘಟನೆ ಬೆಳಕಿಗೆಬಂದಿದೆ.

ವಿಧಾನ ಸಭೆ ಚುನಾವಣೆಗೆ ಮತದಾರರ ಸೆಳೆಯೋದಕ್ಕೆ ಶಾಸಕ ಟಿ.ಡಿ ರಾಜೇಗೌಡ ನೀಡಿದ ಕುಕ್ಕರ್‌ ಗಳನ್ನು ಮನೆ ಮನೆಗೆ ಹಂಚಲಾಗಿತ್ತು. ಗಿಫ್ಟ್‌ ನೀಡಿದ ಕುಕ್ಕರ್‌ನಲ್ಲಿ ತರಕಾರಿ ಬೇಯಿಸಲು ಇಟ್ಟಾಗ ಇದ್ದಕ್ಕಿಂದತೆ ಸ್ಪೋಟಗೊಂಡು ಭಾರೀ ಅನಾಹುತವೊಂದು ತಪ್ಪಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ದೇವರಾಜ್‌ನ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ತರಕಾರಿ ಬೇಯಿಸಲು ಇಟ್ಟು ಮನೆಯಿಂದ ಹೊರಗೆ ಕುಳಿತಿದ್ದಾಗ ಈ ದುರ್ಘಟನೆ ನಡೆಸಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.