ವಾರಣಾಸಿಯಲ್ಲಿ ಮತ್ತೆ ಪ್ರಧಾನಿ ಮೋದಿ: 870 ಕೋಟಿ ರೂ ವೆಚ್ಚದ 22 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ವಾರಣಾಸಿ: ತಮ್ಮ ಲೋಕಸಭಾ ಸ್ವಕ್ಷೇತ್ರ ವಾರಣಾಸಿಗೆ ಮತ್ತೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಬಾರಿ ಸುಮಾರು 870 ಕೋಟಿ ರೂ ವೆಚ್ಚದ 22 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಇಂದು ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸಂಸದೀಯ ಕ್ಷೇತ್ರದಲ್ಲಿ 870 ಕೋಟಿ ರೂ.ಗಳ 22 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
Delighted to be in Varanasi once again. Addressing a public meeting. #यूपी_में_श्वेत_क्रांति https://t.co/SkUfpAUZUg
— Narendra Modi (@narendramodi) December 23, 2021
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, 'ಹೈನುಗಾರಿಕೆ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುವುದರಿಂದ ಇಂದು 'ಬನಸ್ ಡೈರಿ ಸಂಕುಲ'ಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ನಾನು ಇಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ದೇಶವು 'ಕಿಸಾನ್ ದಿವಸ್' ಅನ್ನು ಆಚರಿಸುತ್ತಿದೆ ಎಂದು ಹೇಳಿದರು.
ಎರಡು ವಾರಗಳ ಹಿಂದೆ ಮೋದಿ ವಾರಣಾಸಿಯಲ್ಲಿದ್ದರು. ಕಾಶಿ ಕಾರಿಡಾರ್ ಉದ್ಘಾಟನೆ ಮಾಡಿದ್ದರು.
ದೇಶದ ರೈತರನ್ನು ಆಚರಿಸುವ ಕಿಸಾನ್ ದಿವಸ್ನಲ್ಲಿ, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಸರ್ಕಾರವು ನಿರಾಕರಿಸಿದ್ದರಿಂದ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸುಮಾರು 750 ರೈತರು ಸಾವನ್ನಪ್ಪಿದ್ದರು. ಫೆಬ್ರವರಿ 2022 ರಿಂದ ಪ್ರಾರಂಭವಾಗುವ ಹಲವಾರು ರಾಜ್ಯ ಚುನಾವಣೆಗಳೊಂದಿಗೆ, ಸರ್ಕಾರವು ಅಂತಿಮವಾಗಿ ಕಳೆದ ತಿಂಗಳು ಕಾನೂನುಗಳನ್ನು ರದ್ದುಗೊಳಿಸಿತ್ತು.