ವಾಣಿಜ್ಯ ಗ್ಯಾಸ್ ಮೇಲಿನ ರಿಯಾಯಿತಿ ದಿಢೀರ್ ರದ್ದು: ಹೋಟೆಲ್ ತಿನಿಸು ದುಬಾರಿ
ಬೆಂಗಳೂರು ; ರಾಜ್ಯದಲ್ಲಿ ಮತ್ತೆ ಹೋಟೆಲ್ ಗಳಲ್ಲಿ ತಿಂಡಿ- ತಿನಿಸು ದರ ಏರಿಕೆಯಾಗುವ ಸಾಧ್ಯತೆ ಇದೆ. ಹೀಗೊಂದು ಗುಮ್ಮ ಮತ್ತೆ ಗ್ರಾಹಕರಿಗೆ ಕಾಡುತ್ತಿದೆ. ಯಾಕೆಂದ್ರೆ ಇಲ್ಲಿವರೆಗೆ ಕಮರ್ಷಿಯಲ್ ಗ್ಯಾಸ್ ಕೊಡುತ್ತಿದ್ದ ಡಿಸ್ಕೌಂಟ್ ಕಟ್ ಆಗಿದೆ. ಇದರಿಂದ ಹೊಟೇಲ್ ಉದ್ಯಮಿಗಳಿಗೆ ಮತ್ತೆ ಹೊರೆಬೀಳಲಿದೆ.
ಬೆಲೆ ಏರಿಕೆಯ ಬಿಸಿ ಮತ್ತೆ ಶುರುವಾಗಿದೆ. ಪೆಟ್ರೋಲ್, ಡೀಸೆಲ್, ದಿನಸಿ, ಅಡುಗೆ ಎಣ್ಣೆ ಜೊತೆಗೆ ತುಪ್ಪ ದರ ಏರಿಕೆ ಆಗಿದೆ. ಇದೀಗ ಮತ್ತೆ ಹೋಟೆಲ್ ತಿನಿಸು ದರ ಹೆಚ್ಚಳ ಭೀತಿ ಎದುರಾಗಿದೆ.
ಭಾರೀ ಡಿಸ್ಕೌಂಟ್ ಬಂದ್!
ಯಾಕೆಂದ್ರೆ ಈ ಬಾರಿಯ ಕಮರ್ಷಿಯಲ್ ಗ್ಯಾಸ್ ದರ ಏರಿಕೆಯಾಗಿಲ್ಲ. ಆದ್ರೆ ಅದಕ್ಕೆ ಕೊಡುತ್ತಿದ್ದ ಭಾರೀ ಡಿಸ್ಕೌಂಟ್ ಬಂದ್ ಆಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಕಮರ್ಷಿಯಲ್ ಗ್ಯಾಸ್ ಪಡೆದು ಹೋಟೆಲ್ ನಡೆಸಲಾಗುತ್ತಿತ್ತು. ಸದ್ಯ ಪ್ರತಿ ಕಮರ್ಷಿಯಲ್ ಸಿಲಿಂಡರ್ ದರ 1850 ರೂ. ಇದೆ.
ಈ ಮೊದಲು ಒಂದು ಗ್ಯಾಸ್ ಗೆ 300 ವರೆಗೆ ಡಿಸ್ಕೌಂಟ್ ಸಿಗ್ತಿತ್ತು. ಇದೀಗ ರಿಯಾಯಿತಿ ಇರದೇ ಇರುವುದರಿಂದ ಆಯಾ ದಿನದ ದರವನ್ನೇ ಕೊಡಬೇಕಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಗ್ಯಾಸ್ ಏಜೆನ್ಸಿ ರಿಯಾಯಿತಿ ಕೊಡುವುದನ್ನು ನಿಲ್ಲಿಸಿವೆ. ಇದೀಗ ಆಯಾ ದಿನದ ಕಮರ್ಷಿಯಲ್ ಗ್ಯಾಸ್ ದರ ಹೋಟೆಲ್ ಮಾಲೀಕರು ಪಾವತಿಸಬೇಕಾಗಿದೆ ಎಂದು ನಿಸರ್ಗ ಹೋಟೆಲ್ ಮಾಲೀಕರು, ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಸದಸ್ಯರಾದ ಕೃಷ್ಣರಾಜ್ ಹೇಳಿದ್ದಾರೆ.
ಮಾಹಿತಿ ನೀಡದೆ ರಿಯಾಯಿತಿ ಕಟ್!
ಹೋಟೆಲ್ ಬಳಸುವ ವಾಣಿಜ್ಯ ಗ್ಯಾಸ್ ಪೂರೈಸುವ 3 ಕಂಪನಿಗಳಿಗೆ ಹಲವು ರಿಯಾಯತಿಯಲ್ಲಿ ನೀಡುತ್ತಿದ್ದವು. ಅದು 200-300 ರೂ.ವರೆಗೆ ಇರುತ್ತಿತ್ತು. 50ಕ್ಕಿಂತ ಹೆಚ್ಚು ಸಿಲಿಂಡರ್‌ಗಳ ಪಡೆದರೆ ಒಂದು ರಿಯಾಯಿತಿ, 100ಕ್ಕೆ ಒಂದು ರಿಯಾಯಿತಿ ಹಾಗು 200ಕ್ಕೆ ಇನ್ನೊಂದು ರಿಯಾಯಿತಿ ಇತ್ತು. ಇದೀಗ ಇದ್ದಕ್ಕಿದ್ದಂತೆ ಮೂರು ಗ್ಯಾಸ್ ಏಜೆನ್ಸಿಗಳು ಯಾವುದೇ ಮಾಹಿತಿ ನೀಡದೇ ವಾಣಿಜ್ಯ ಬಳಕೆಯ ಗ್ಯಾಸ್ ರಿಯಾಯಿತಿ ದರ ಕಡಿತಗೊಳಿಸಿದೆ.
ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ!
ಈ ನಿರ್ಧಾರದಿಂದ ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ಬೀಳುತ್ತೆ. ಪ್ರತಿದಿನ ಸರಾಸರಿ ಐದು ವಾಣಿಜ್ಯ ಬಳಕೆಯ ಗ್ಯಾಸ್ ಬಳಸುತ್ತಿದ್ದ ಹೋಟೆಲ್ ಮಾಲಿಕರಿಗೆ ಕನಿಷ್ಟ ಒಂದುವರೆ ಸಾವಿರ ಹೊರೆಯಾಗಲಿದೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಬೇಕು. ಈ ಬಗ್ಗೆ ಹೋಟೆಲ್ ಸಂಘದಲ್ಲಿ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡ್ತೇವೆ ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಾ?
ಸದ್ಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿರುವ ಹೋಟೆಲ್ ಮಾಲೀಕರು, ಉದ್ಯಮಿಗಳು, ಕಮಿರ್ಷಿಯಲ್ ಗ್ಯಾಸ್ ರಿಯಾಯಿತ ದರ ಕಡಿತದಿಂದ ಪ್ರತಿದಿನ ಕನಿಷ್ಟ 2 ಸಾವಿರ ಹೊರೆಯಾಗಲಿದೆ.
ಈ ಹೊರೆ ನಿಭಾಯಿಸಲು ಗ್ರಾಹಕರ ಜೇಬಿಗೆ ಬರೆ ಬೀಳುತ್ತಾ ದರ ಏರಿಕೆ ಮಾಡಿದ್ರೆ ಗ್ರಾಹಕರು ಬರೋದಿಲ್ಲ! ಏರಿಕೆ ಮಾಡದಿದ್ರೆ ಹೊಟೇಲ್ ವ್ಯಾಪಾರ ವರ್ಕ್ ಔಟ್ ಆಗೋದಿಲ್ಲ! ಮುಂದೇನು ಮಾಡ್ತಾರೋ ಕಾದು ನೋಡಬೇಕು.