ವಂಡರ್‌ಲಾ ಪಾರ್ಕ್' ಪ್ರಿಯರಿಗೆ ಗುಡ್ ನ್ಯೂಸ್: 'ಕ್ರಿಸ್ ಮಸ್ ಆಚರಣೆ'ಗೆ 'ವಿಶೇಷ ಕೊಡುಗೆ' ಘೋಷಣೆ

ವಂಡರ್‌ಲಾ ಪಾರ್ಕ್' ಪ್ರಿಯರಿಗೆ ಗುಡ್ ನ್ಯೂಸ್: 'ಕ್ರಿಸ್ ಮಸ್ ಆಚರಣೆ'ಗೆ 'ವಿಶೇಷ ಕೊಡುಗೆ' ಘೋಷಣೆ

ಬೆಂಗಳೂರು: ಪ್ರತಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ವಂಡರ್‌ಲಾ ಹಾಲಿಡೇಸ್‌ ( wonderla holidays ) ಈ ಬಾರಿ ಕ್ರಿಸ್‌ಮಸ್‌ನನ್ನು ( christmas ) ಡಿಸೆಂಬರ್‌ 24ರಿಂದ ಜನವರಿ 1ರವರೆಗೆ ವಿಶೇಷ ಕೊಡುಗೆ ನೀಡುವ ಮೂಲಕ ಆಚರಿಸುತ್ತಿದೆ.

ಕ್ರಿಸ್‌ಮಸ್‌ ಆಚರಣೆಯ ಅಂಗವಾಗಿ 6 ದಿನಗಳ ಕಾಲ ಲೈವ್‌ ಶೋ, ಸಿಹಿತಿಂಡಿ, ಕ್ರಿಸ್‌ಮಸ್‌ ಟ್ರೀ ಅಲಂಕಾರ, ವಿಶೇಷ ದೀಪಗಳ ಮೆರವಣಿಗೆ, ಆಹಾರ ಉತ್ಸವ, 60ಕ್ಕೂ ಹೆಚ್ಚು ಮೋಜಿನ ಆಟಗಳು, ಡಿಜೆ, ವಿಶೇಷ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದೆ. ಇದರ ಜೊತೆಗೆ ಹಲವು ಯೋಜನೆಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಕ್ರಿಸ್‌ಮಸ್‌ನ ಮೆರುಗು ಹೆಚ್ಚಿಸುವ ಉದ್ದೇಶದಿಂದ 5 ದಿನಗಳ ಮುಂಚಿತವಾಗಿಯೇ ಟಿಕೆಡ್‌ ಬುಕ್‌ ಮಾಡಿದವರಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ.

22 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳು ತಮ್ಮ ಕಾಲೇಜು ಗುರುತಿನ ಚೀಟಿ ತೋರಿಸುವ ಮೂಲಕ ಶೇ.20ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು, ಬಿಎಂಟಿಸಿ ವೋಲ್ವೋ ಬಸ್‌ಗಳ ಮೂಲಕ ವಂಡರ್‌ಲಾಗೆ ಭೇಟಿ ನೀಡುವವರು ಟಿಕೆಟ್‌ ತೋರಿಸಿದರೆ ಶೇ.15ರಷ್ಟು ರಿಯಾಯಿತಿ ನೀಡಲಾಗುವುದು. ಇನ್ನು, ವಂಡರ್‌ಲಾ ರೆಸಾರ್ಟ್‌ನಲ್ಲಿಯೂ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ರೆಸಾರ್ಟ್‌ ಒಂದು ದಿನದ ತಂಗುವಿಕೆಯ ಜೊತೆಗೆ, ಎರಡು ವಂಡರ್‌ಲಾ ಪಾರ್ಕ್‌ ಟಿಕೆಟ್‌ ಉಚಿತವಾಗಿ ಪಡೆದುಕೊಳ್ಳಬಹುದು. ಲೈವ್‌ ಡಿಜೆ, ಲಿಕ್ವಿಡ್‌, ಉಪಹಾರ ಸೇರಿದಂತೆ ಹಲವು ವ್ಯವಸ್ಥೆ ಇರಲಿದ್ದು, ಇದರ ಪ್ಯಾಕೇಜ್‌ 9500 + ತೆರಿಗೆಗಳಿಗೆ ಇರಲಿದೆ.

ಹೊಸ ವರ್ಷದ ಹಿಂದಿನ ದಿನದಂದು ಅಂಕಿತಾ ಶ್ರೀವಾಸ್ತವ್‌ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆ ದಿನ ರಾತ್ರಿ ಚಂಡೀಗಢದಿಂದ ಡಿಜೆ ಮಾಂಟ್ಜ್‌ ಅವರ ಡಿಜೆ ಪ್ರದರ್ಶನ ಸಹ ಇರಲಿದೆ. ಜೊತೆಗೆ ಅನ್‌ಲಿಮಿಟೆಡ್‌ ಕಾಕ್‌ಟೇಲ್‌ ಹಾಗೂ ರಾತ್ರಿ ಉಪಹಾರ ಇರಲಿದೆ. ಈ ವೇಳೆ ಟಿಕೆಟ್‌ ಪಡೆದವರಿಗೆ NYE ಪ್ಯಾಕೇಜ್ ಉಪಹಾರದೊಂದಿಗೆ ರೆಸಾರ್ಟ್‌ನಲ್ಲಿ ರಾತ್ರಿ ತಂಗುವಿಕೆ, ಅಮ್ಯೂಸ್‌ಮೆಂಟ್ ಪಾರ್ಕ್‌ಗೆ 2 ಫಾಸ್ಟ್ರ್ಯಾಕ್ ಟಿಕೆಟ್‌ಗಳು ಮತ್ತು ಹೊಸ ವರ್ಷದ ಆಚರಣೆಗೆ ಪ್ರವೇಶವನ್ನು ಒಳಗೊಂಡಿದೆ.